ಶಿವರಾತ್ರಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು
ಹಿಂದೂಗಳು ಹತ್ತು ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲಿ ಕೆಲವು ಹಬ್ಬಗಳನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಶಿವ ರಾತ್ರಿಯನ್ನು ಅದ್ದೂರಿಯಾಗಿ ಆಚರಿಸಿ ಶಿವನ ಕೃಪೆಗೆ ಪಾತ್ರರಗುತ್ತಾರೆ.
ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಶಿವರಾತ್ರಿ ಬರುತ್ತದೆ. ಈ ಹಬ್ಬದ ವಿಶೇಷತೆ ಅಂದ್ರೆ ಇಡೀದಿನ ಉಪವಾಸವಿದ್ದು ರಾತ್ರಿ ಇಡೀ ಜಾಗರಣೆಯಿದ್ದು ಪರಮೇಶ್ವರನ ಪೂಜೆ ಮಾಡಲಾಗುತ್ತೆ. ಅಷ್ಟೇ ಅಲ್ಲದೆ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಶಿವನನ್ನೂ ಆರಾಧಿಸುತ್ತಾರೆ.
ನಮ್ಮಲ್ಲಿ ಆಚರಿಸುವ ಪ್ರತಿ ಹಬ್ಬವು ಪ್ರಾಚೀನ ಕಾಲ ಪರಂಪರೆ ಸಂಸ್ಕೃತಿ, ಶಕ್ತಿ ಅಥವಾ ಅಮರವಾಗಿರುವ ವ್ಯಕ್ತಿಯ ಪ್ರತೀಕವಾಗಿರುತ್ತದೆ. ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾರೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿಯೂ ಇದೆ.
ಹಾಗೂ ಕೆಲವು ಹಿಂದೂ ಪುರಾಣಗಳಲ್ಲಿರುವಂತೆ ಶಿವನು ಪಾರ್ವತಿ ದೇವಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವಾಗಿದೆ. ಪಾರ್ವತಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ. ಶಿವನ ಜಪ ಮಾಡಿ ಶಿವನನ್ನು ಒಲಿಸಿಕೊಂಡು ವಿವಾಹಳಾದಳು ಎಂದು ತಿಳಿಸುತ್ತಾರೆ.
ಅಷ್ಟಲ್ಲದೆ .ದೇವತೆಗಳೂ ಮತ್ತೇ ರಾಕ್ಷಸ ನಡುವೆ ಅಮೃತವನ್ನೂ ಪಡೆಯಲು ಸಮುದ್ರಮಂಥನ ಮಾಡುವ ಸಮಯದಲ್ಲಿ ಹಾಲಾಹಲ ಉತ್ಪತ್ತಿಯಾಯಿತು ಇದು ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಹೀಗಾಗಿ ಲೋಕಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ. ಅದೇ ಸಮಯಕ್ಕೆ ಪತ್ನಿ ಪಾರ್ವತಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು. ವ್ಯಕ್ತಿ ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು. ಹೀಗಾಗಿಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.
ಹೀಗೆ ನಾನಾ ಕಥೆಗಳು ಇವೆ. ಭಾರತೀಯರು ಆಚರಿಸುವ ಪ್ರತಿ ಹಬ್ಬ ಹರಿದಿನಕ್ಕೆ ಧಾರ್ಮಿಕ ಕಾರಣಗಳ ಜೊತೆ ವೈಜ್ಞಾನಿಕ ಕಾರಣಗಳು ಇದೆ. ಅದೆಂದರೆ ಶಿವ ರಾತ್ರಿ ಸಂದರ್ಭದಲ್ಲಿ ಚಳಿಗಾಲ ಮುಗಿದು ಬೇಸಗೆಕಾಲ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆ ಉಂಟಾಗುತ್ತದೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ ಬರುವುದು ಸರ್ವೆ ಸಾಮಾನ್ಯ. ಶಿವರಾತ್ರಿಯಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಈ ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ಕಡಿಮೆ ಮಾಡುವ ಗುಣವಿರುವಂತ ಬಿಲ್ವದಿಂದ ಆರಾಧನೆ ಮಾಡುವುದ್ದರಿಂದ ಉಸಿರಾಟ ಸಮಸ್ಯೆ ಕಡಿಮೆ ಆಗುತ್ತದೆ .
ಇದೊಂದು ಕೇವಲ ಹಬ್ಬ ಅಲ್ಲ. ನಾವು ಆಚರಿಸುವ ಪ್ರತಿಯೊಂದು ಹಬ್ಬವು ವೈಜ್ಞಾನಿಕ ಕಾರಣ ಮತ್ತೇ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.