-->

ತುಳಸಿ ಸಸ್ಯಕ್ಕೆ ಏನನ್ನು ಅರ್ಪಣೆ ಮಾಡಿದ್ದಾರೆ ತುಳಸಿಯ ಕೃಪೆಗೆ ಪಾತ್ರರಾಗುತ್ತಾರೆ

ತುಳಸಿ ಸಸ್ಯಕ್ಕೆ ಏನನ್ನು ಅರ್ಪಣೆ ಮಾಡಿದ್ದಾರೆ ತುಳಸಿಯ ಕೃಪೆಗೆ ಪಾತ್ರರಾಗುತ್ತಾರೆ


ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ   ಲಕ್ಷ್ಮಿಯ ಸಂಕೇತವೆಂದು ತುಳಸಿಯನ್ನು ಪರಿಗಣಿಸಲಾಗುತ್ತದೆ . ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅರಾದಿಸಿದ್ದರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ನಮ್ಮ ಸನಾತನ ಧರ್ಮದಲ್ಲಿದೆ.ಇದರೊಂದಿಗೆ ಮನೆಯಲ್ಲಿ ಸದಾ ಸುಖ, ಶಾಂತಿ ನೆಲೆಸಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿಯನ್ನು  ಪೂಜಿಸುವುದ್ದಾರ ಜೊತೆಗೆ ನೀರನ್ನು ಹಾಕುವುದು  ಮತ್ತೆ ತುಳಸಿಗೆ ಕೆಲವು ವಸ್ತುಗಳನ್ನು ನೀಡುವುದರಿಂದ  ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು.

1. ನಿಯಮಿತವಾಗಿ ನೀರನ್ನು ನೀಡಿ:
ತುಳಸಿ ಗಿಡಕ್ಕೆ ನಿಯಮಿತವಾಗಿ ನೀರನ್ನು ಹಾಕುವುದು ತುಂಬಾನೇ ಪ್ರಯೋಗ ಎಂದು ಹೇಳಲಾಗುತ್ತದೆ. ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸುವುದರಿಂದ ತುಳಸಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಭಾನುವಾರದ ದಿನದಂದು ತುಳಸಿ ಸಸ್ಯಕ್ಕೆ ನೀರನ್ನು ನೀಡಲು ಹೋಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು.

2. ತುಪ್ಪದ ದೀಪವನ್ನು ಬೆಳಗಿಸಿ:
ಪ್ರತಿನಿತ್ಯವೂ ತುಳಸಿ ಗಿಡದ ಮುಂದೆ ನಾವು ತುಪ್ಪದ ದೀಪವನ್ನು ಹಚ್ಚಿಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಸಂತುಷ್ಟಳಾಗುತ್ತಾಳೆ ಮತ್ತು ನಿಮಗೆ ಹಣದ ಲಾಭವನ್ನು ನೀಡುತ್ತಾಳೆ. ಇದರೊಂದಿಗೆ ಮನೆಯಲ್ಲಿ ಯಾವತ್ತೂ ಹಣಕಾಸಿನ ಸಮಸ್ಯೆ ಎದುರಾಗದಂತೆ ಲಕ್ಷ್ಮಿ ದೇವಿಯು ನಿಮ್ಮನ್ನು ರಕ್ಷಿಸುತ್ತಾಳೆ.

3. ತುಳಸಿಗೆ ಕಬ್ಬಿನ ರಸವನ್ನು ಅರ್ಪಿಸಿ:
ತುಳಸಿ ಗಿಡಕ್ಕೆ ಕಬ್ಬಿನ ರಸವನ್ನು ಅರ್ಪಿಸುವುದು ಉತ್ತಮ . ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡಕ್ಕೆ ನಾವು ಕಬ್ಬಿನ ರಸವನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಇದರೊಂದಿಗೆ, ಕುಟುಂಬ ಸದಸ್ಯರ ನಡುವಿನ ಸಂಬಂಧವು ಉತ್ತಮವಾಗಿರುತ್ತದೆ. ಆದ್ದರಿಂದ ತುಳಸಿಯನ್ನು ಪೂಜಿಸುವಾಗ ಕಬ್ಬಿನ ರಸವನ್ನು ಅರ್ಪಿಸುವುದು ತುಂಬಾನೇ ಮಂಗಳಕರವಾಗಿರುತ್ತದೆ.

4. ತುಳಸಿಗೆ ಹಸಿ ಹಾಲು ಅರ್ಪಣೆ ಮಾಡಿ
ಶಾಸ್ತ್ರಗಳಲ್ಲಿ ಹಾಲನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡಕ್ಕೆ ಹಸಿ ಹಾಲನ್ನು ನೈವೇದ್ಯ ಮಾಡಿದರೆ ಮನೆಯಲ್ಲಿ ಸುಖ, ಸಂತೋಷ ನೆಲೆಯಾಗುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಕುಟುಂಬದ ಸದಸ್ಯರು ಆರ್ಥಿಕ ಲಾಭವನ್ನು ಕೂಡ ಪಡೆದುಕೊಳ್ಳುತ್ತಾರೆ
ಹೀಗೆ ತುಳಸಿ ದೇವಿಯನ್ನು ಪೂಜಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ

Ads on article

Advertise in articles 1

advertising articles 2

Advertise under the article