-->

ಕಿವುಡುತನ ಹೇಗೆ ಬರುತ್ತೆ

ಕಿವುಡುತನ ಹೇಗೆ ಬರುತ್ತೆ


ಮುಖದ ಸೌಂದರ್ಯದ ಬಗ್ಗೆ ಇರುವ ಕಾಳಜಿ ಇರುವಷ್ಟು  ಕಿವಿಯ ಆರೋಗ್ಯದ ಮೇಲೆ ಇರಲ್ಲ . ಕೆಲವರಿಗೆ ಹುಟ್ಟಿದಾಗಿನಿಂದಲೇ ಶ್ರವಣ ದೋಷವಿದ್ದಾರೆ ಇನ್ನು ಕೆಲವರಿಗೆ  ಜೀವನಶೈಲಿ, ಸುತ್ತಲಿನ ಪರಿಸರದ ವಾತಾವರಣದ ಪ್ರಭಾವದಿಂದ ಕಿವಿಯ ಸಮಸ್ಯೆ ಉಂಟಾಗುತ್ತದೆ.  ಕಿವಿಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ತುಂಬಾ ಅಗತ್ಯ ಏಕೆಂದರೆ ಮಾತು ಮತ್ತು ಭಾಷೆ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ .

. ಈ ಹಿನ್ನೆಲೆಯಲ್ಲಿ ನಮ್ಮ ಕಿವಿಯ  ಆರೋಗ್ಯದ  ಬಗ್ಗೆ ಕಾಳಜಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ 

 ಶ್ರವಣ ದೋಷ  ಬರಲು ಕಾರಣ 
*ಜೆನೆಟಿಕ್ಸ್‌
 * ಸೋಂಕು, ಗಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು, 
* ಒಟೊಟಾಕ್ಸಿಕ್‌ ಔಷಧಿಗಳ ನಿರಂತರ ಬಳಕೆ 
* ಭಾರೀ ಪ್ರಮಾಣದ ಶಬ್ದವನ್ನು ಆಲಿಸುವುದರಿಂದಲೂ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ 
- ಶೀತ, ಕೆಮ್ಮಿನಿಂದ ಕಿವಿ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು 


​​ಶ್ರವಣ ದೋಷ ತಡೆಯುವುದು ಹೇಗೆ
ದಡಾರ, ಮಂಪ್ಸ್, ರುಬೆಲ್ಲಾ ಮತ್ತು ನ್ಯುಮೋಕೊಕಲ್ ರೋಗಗಳ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. 
ಏಕೆಂದರೆ ಈ ಸೋಂಕಿನ ಸಮಸ್ಯೆಗಳು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು
 ನವಜಾತ ಶಿಶುಗಳ ಕಿವಿ ಪರಿಶೀಲನೆ ಅತ್ಯಗತ್ಯ ಏಕೆಂದರೆ ಕುಟುಂಬದಲ್ಲಿ ಯಾರಿಗಾದರೂ ಶ್ರವಣದೋಷ ಸಮಸ್ಯೆ ಇದ್ದಲ್ಲಿ ಅದು ಅನುವಂಶಿಕವಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ನಿರ್ವಹಣೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು
- ಕಿವಿಯ ಸ್ವಚ್ಛತೆಗಾಗಿ ಕಿವಿಯಲ್ಲಿ ಪಿನ್, ಬಡ್ಸ್ ಮತ್ತು ಇತರೆ ವಸ್ತುಗಳನ್ನು ಹಾಕುವುದು ಸರಿಯಲ್ಲ. ಇದರಿಂದಾಗಿಯೂ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
- ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನೆಮದ್ದುಗಳ ಮೊರೆ ಹೋಗುವುದಲ್ಲ ಸರಿಯಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
- ಭಾರೀ ಪ್ರಮಾಣದ ಶಬ್ದ ಆಲಿಸುವುದು, ಹೆಡ್‌ಫೋನ್ ಬಳಸುವುದನ್ನು ತಪ್ಪಿಸುವ ಮೂಲಕವೂ ಶ್ರವಣ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಆದಷ್ಟು ಆರೋಗ್ಯದ ಮೇಲೆ ಗಮನವಿರಲಿ

Ads on article

Advertise in articles 1

advertising articles 2

Advertise under the article