ಎಗ್ ಕರಿ ಮಾಡಿಕೊಟ್ಟಿಲ್ಲವೆಂದು ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯನ್ನೇ ಸುತ್ತಿಗೆಯಲ್ಲಿ ಹೊಡೆದು ಕೊಂದ

ಗುರುಗ್ರಾಮ್: ಎಗ್ ಕರಿ ಮಾಡಿ ಕೊಡದೆ ಇದ್ದದಕ್ಕೆ ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯನ್ನೇ ಹತ್ಯೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. 

ಅಂಜಲಿ(32) ಮೃತಪಟ್ಟ ಮಹಿಳೆ. ಲಲ್ಲನ್ ಯಾದವ್(35) ಕೊಲೆ ಮಾಡಿರುವ ಆರೋಪಿ. 

ಚೌಮಾ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ.

ಲಲ್ಲಾನ್ ಯಾದವ್ ನ ಹೆಂಡತಿ 6 ವರ್ಷದ ಹಿಂದೆ ಹಾವು ಕಚ್ಚಿ ಸತ್ತು ಹೋಗಿದ್ದಳು. ಕಳೆದ 7 ತಿಂಗಳಿನಿಂದ ಅಂಜಲಿ ಎಂಬಾಕೆಯೊಂದಿಗೆ ಲಲ್ಲನ್ ಯಾದವ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದನು. ಎಗ್ ಕರಿ ಮಾಡಿಕೊಡಲು ಕೇಳಿದ್ದಾನೆ. ಆದರೆ ಅಂಜಲಿ ಎಗ್ ಕರಿ ಮಾಡಿಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಲಲ್ಲನ್, ಅಂಜಲಿಗೆ ಬೈದಾಡಿದ್ದಾನೆ‌. ಇದರಿಂದ ಇವರಿಬ್ಬರ ನಡುವೆ ಗಲಾಟೆ ನಡೆದಿದೆ. ಮದ್ಯಪಾನದ ಅಮಲಿನಲ್ಲಿದ್ದ ಲಲ್ಲನ್, ಅಂಜಲಿಗೆ ಬೆಲ್ಟ್ ಮತ್ತು ಸುತ್ತಿಗೆಯಲ್ಲಿ ಕೊಲೆ ಮಾಡಿದ್ದಾನೆ. ಪರಿಣಾಮ ಆಕೆ ಪ್ರಾಣವನ್ನೇ ಬಿಟ್ಟಿದ್ದಾಳೆ.

ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಗುರುಗ್ರಾಮ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.