ಡ್ಯಾನ್ಸ್ ಮಾಡುತ್ತಿದ್ದಾಗ ರೆಕಾರ್ಡ್ ಸಂಗೀತವನ್ನು ನಿಲ್ಲಿಸಿದಕ್ಕಾಗಿ ಸಹೋದರನನ್ನೇ ಕೊಡಲಿಂದ ಕಡಿದು ಹತ್ಯೆ

ಸತ್ನಾ: ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ರೆಕಾರ್ಡ್  ಸಂಗೀತವನ್ನು ನಿಲ್ಲಿಸಿದ್ದು ಮಾತ್ರವಲ್ಲದೆ ನೃತ್ಯ ಮಾಡದಂತೆ ತಡೆದಿದ್ದರಿಂದ ರೊಚ್ಚಿಗೆದ್ದ ಯುವಕನೊಬ್ಬ ತನ್ನ ಸಹೋದರನನ್ನೇ ಕೊಡಲಿಯಿಂದ ಕಡಿದು ಕೊಲೆಗೈದ ಬರ್ಬರ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಕೋಠಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಕೊಲೆ ಆರೋಪಿ ರಾಜ್ ಕುಮಾರ್ ಕೋಲ್ (30) ಎಂಬಾತ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.

ರಾಜಕುಮಾರ್‌ನ ಸಹೋದರ ರಾಕೇಶ್ (35) ತನ್ನ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದನು. ಈ ಸಂದರ್ಭ ಸೌಂಡ್‌ ಸಿಸ್ಟಮ್ ಮೂಲಕ ಸಂಗೀತ ಹಾಕಲಾಗಿತ್ತು. ಈ ವೇಳೆ ರಾಕೇಶ್, ಸಂಗೀತವನ್ನು ನಿಲ್ಲಿಸಿದ್ದಾನೆ. ಆದರೆ ಆರೋಪಿ ರಾಜ್ ಕುಮಾರ್ ನೃತ್ಯ ಮುಂದುವರಿಸಲು ಬಯಸಿದ್ದನು. ಆದ್ದರಿಂದ ರೆಕಾರ್ಡ್ ಸಂಗೀತ ಹಾಕುವಂತೆ ತನ್ನ ಸಹೋದರನನ್ನು ಒತ್ತಾಯಿಸಿದ್ದಾನೆ.

ಈ ವಿಚಾರಕ್ಕಾಗಿ ಸಹೋದರರ ನಡುವೆ ಭಾರೀ ವಾಗ್ವಾದ ಏರ್ಪಟ್ಟಿದೆ. ರೋಷದ ಭರದಲ್ಲಿ ರಾಜಕುಮಾರ್, ಸೋದರ ರಾಕೇಶ್ ಮೇಲೆ ಕೊಡಲಿಯಿಂದ ದಾಳಿ ನಡೆಸಿ, ಆತನನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಬಳಿಕ ಆರೋಪಿ ಘಟನಾ ಸ್ಥಳದಿಂದ ಪರಾರಿಯಾಗಿದ್ದನು. ಪೊಲೀಸರು ಶೋಧ ಕಾರ್ಯ ನಡೆಸಿ, ಕಿರುಸೇತುವೆಯೊಂದರ ಸಮೀಪ ಅವಿತಿದ್ದ ಆತನನ್ನು ಬಂಧಿಸಿದ್ದಾರೆ. ಅಪರಾಧ ಕೃತ್ಯಕ್ಕೆ ಬಳಸಿಕೊಂಡ ಮಾರಕಾಯಿಧವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu