Mangalore- ಚರ್ಚ್ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ- ವಿಡಿಯೋ ವೈರಲ್

ಮಂಗಳೂರು: ಚರ್ಚ್ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯನಡ್ಕದ ಮನೇಲಾ ಎಂಬಲ್ಲಿ ಈ ಘಟನೆ ನಡೆದಿದೆ. ಪೆರಿಯಲ್ತಡ್ಕ ಕ್ರಿಸ್ತ‌ ಕಿಂಗ್ ಪೆರಿಶ್ ನ ಧರ್ಮಗುರು ನೆಲ್ಸನ್ ಒಲಿವೇರಾ ಹಲ್ಲೆ ಮಾಡಿದ ಧರ್ಮಗುರು ಆಗಿದ್ದಾರೆ. ಜೋರ್ಜ್ ಮಾಂತೇರಿಯೋ(79) ಮತ್ತು ಪತ್ನಿ ಫಿಲೋಮಿನಾ(72) ಎಂಬವರು ಹಲ್ಲೆಗೊಳಗಾಗಿದ್ದಾರೆ.




ಮನೆ ಶುದ್ದಗೊಳಿಸಲು ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿದ ಪಾದ್ರಿ ಚರ್ಚ್‌ಗೆ ದೇಣಿಗೆ ವಂತಿಗೆ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ವೃದ್ಧ ದಂಪತಿಗೆ ಹಲ್ಲೆ ಮಾಡಿದ್ದಾರೆ. ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದಡ. 
ಧರ್ಮಗುರು ವಜಾ
ಘಟನೆಯ‌ ಹಿನ್ನೆಲೆಯಲ್ಲಿ ಚರ್ಚ್ ಧರ್ಮಗುರುವನ್ನು ವಜಾ ಮಾಡಲಾಗಿದೆ‌ ಎಂದು ಪ್ರಕಟನೆ ತಿಳಿಸಿದೆ.