ಪುತ್ತೂರು: ಅಂಗನವಾಡಿ ಬೀಗ ಒಡೆದು ಪುಟಾಣಿಗಳ ಮೊಟ್ಟೆಯಿಂದ ಆಮ್ಲೇಟ್ ಮಾಡಿ ತಿಂದ ಕಿಡಿಗೇಡಿಗಳು




ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯ ಸಮೀಪದ ಅಂಗನವಾಡಿ ಕೇಂದ್ರದ ಬೀಗ ಒಡೆದು ಒಳ ನುಗ್ಗಿರುವ ಕಿಡಿಗೇಡಿಗಳು ಅಂಗನವಾಡಿ ಕೇಂದ್ರದ ಮಕ್ಕಳಿಗೆಂದು ದಾಸ್ತಾನು ಇರಿಸಿದ್ದ ಮೊಟ್ಟೆಗಳನ್ನೇ ಆಮ್ಲೆಟ್ ಮಾಡಿ ತಿಂದಿರುವ ಘಟನೆ ನಡೆದಿದೆ.


ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಕೇಂದ್ರದ ಬಾಗಿಲು ತೆರೆಯಲೆಂದು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದ ಬೀಗ ಒಡೆದಿರುವುದನ್ನು ಗಮನಿಸಿದ ಅವರು ಒಳಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಂಗನವಾಡಿ ಒಳಗೆ ಯಾವುದೇ ಮೌಲ್ಯಯುತ ವಸ್ತುಗಳು ದೊರಕದಿದ್ದರಿಂದ ಕತ್ರಿಮ ಖದೀಮರು, ಅಂಗನವಾಡಿಯ ಮಕ್ಕಳಿಗೆ ಸೇವಿಸಲು ಎಂದು ದಾಸ್ತಾನು ಇರಿಸಲಾಗಿದ್ದ ಮೊಟ್ಟೆಗಳನ್ನು ಒಡೆದು ಆಮ್ಲೆಟ್ ಮಾಡಿ ತಿಂದಿದ್ದಾರೆ. ಅಂಗನವಾಡಿಯಲ್ಲಿ ಗ್ಯಾಸ್ ಸ್ಟೌವ್ ಮೇಲಿದ್ದ ಪಾತ್ರೆಯ ಮೇಲೆ ಆಮ್ಲೆಟ್ ತುಣುಕು ಕಂಡು ಬಂದಿದೆ. ಇದರಿಂದ ಕಿಡಿಗೇಡಿಗಳು ಆಮ್ಲೆಟ್ ಮಾಡಿ ತಿಂದಿರುವುದು ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದ ಸಿಸಿ ಕ್ಯಾಮರಾವನ್ನು ಎಗರಿಸಿದ್ದಾರೆ. ಒಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ ಎನ್ನಲಾಗಿದೆ.



ಪುತ್ತೂರು ಪೊಲೀಸರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.