ಬಾಳೆನಾರಿನ ಡ್ರೆಸ್ಸಿಂಗ್ ಉತ್ಪನ್ನ ಆವಿಷ್ಕರಿಸಿದ ಹೆಮ್ಮೆಯ ಭಾರತೀಯ ವಿಜ್ಞಾನಿಗಳು!



ನವದೆಹಲಿ: ಅಸ್ಸಾಂನ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಎಎಸ್‌ಎಸ್‌ಟಿ) ಬಾಳೆನಾರಿನಿಂದ ತಯಾರಿಸಿದ ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಗಾಯ ಗುಣಪಡಿಸುವ ಡ್ರೆಸ್ಸಿಂಗ್ ಉತ್ಪನ್ನಗಳನ್ನು ತಯಾರಿಸಿದೆ. 


ಬಾಳೆಹಣ್ಣಿನ ಕೃಷಿಯಲ್ಲಿ ತ್ಯಾಜ್ಯ ಗುರುತಿಸಿಕೊಂಡಿರುವ ಬಾಳೆ ಕಾಂಡದಿಂದ ಇದನ್ನು ಆವಿಷ್ಕರಿಸಲಾಗಿದೆ ಎಂಬುದು ವಿಶೇಷ 

ಈ ಅನ್ವೇಷಣೆ ಸುಸ್ಥಿರ ಪರಿಹಾರವನ್ನು ಹುಡುಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ.


ಪ್ರೊ ದೆವಶಿಶ್ ಚೌಧರಿ ಮತ್ತು ಪ್ರೊ ರಾಜಲಕ್ಷ್ಮೀ ದೇವಿ (ನಿವೃತ್ತ) ನೇತೃತ್ವದ ಸಂಶೋಧಕರ ತಂಡದಲ್ಲಿ ಈ ಅನ್ವೇಷಣೆ ಮಾಡಲಾಗಿದೆ. ಚಿಟೋಸಾನ್ ಮತ್ತು ಗೌರ್ ಗಮ್‌ನಂತಹ ಬಯೋಪಾಲಿಮರ್‌ಗಳೊಂದಿಗೆ ಸಂಯೋಜಿಸಿದಾಗ ಅವು ಅತ್ಯುತ್ತಮ ಯಾಂತ್ರಿಕ ಶಕ್ತಿ ಮತ್ತು ಉತ್ಕರ್ಷಣ ನಿರೋಧಕ ಗುಣ ಹೊಂದಿರುವ ಬಹು ಕ್ರಿಯಾತ್ಮಕ ಪ್ಯಾಚ್ ಅನ್ನು ರಚಿಸಿದ್ದಾರೆ.


ಬಳಿಕ ಈ ಪ್ಯಾಚ್ ಅನ್ನು ವಿಟೆಕ್ಸ್ ನೆಗುಂಡೊ ಎಲ್ ಪ್ಲಾಂಟ್‌ನಿಂದ ಹೊರ ತೆಗೆಯಲಾದ ಸಾರದಲ್ಲಿ ತುಂಬಿಸಿದರು. ಬಾಳೆ ನಾರಿನಲ್ಲಿ ಬಯೋಪಾಲಿಮ‌ರ್ ಕಾಂಪೋಸಿಟ್ ಪ್ಯಾಚ್ ಹೊರ ತೆಗೆದಾಗ ಇದು ಇನ್ ವಿಟ್ರೊ ಔಷಧ ಬಿಡುಗಡೆ ಮಾಡಿದ್ದು ಮತ್ತು ಬ್ಯಾಕ್ಟಿರಿಯಾ ವಿರೋಧಿ ಏಜೆಂಟ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.


ಈ ಹೊಸ ಡ್ರೆಸ್ಸಿಂಗ್ ಉತ್ಪನ್ನದಲ್ಲಿ ಎಲ್ಲಾ ವಸ್ತುಗಳನ್ನು ನೈಸರ್ಗಿಕ ಮತ್ತು ಸ್ಥಳೀಯವಾಗಿ ಲಭ್ಯವಿದ್ದು, ಇದನ್ನು ಉತ್ಪಾದಿಸುವುದು ಕೂಡ ಸರಳವಾಗಿದ್ದು, ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ ಎಂದು ತಂಡ ತಿಳಿಸಿದೆ. 


ಈ ಆವಿಷ್ಕಾರವು ಗಾಯಗಳು ಮಾಸುವಿಕೆಗೆ ಹೊಸ ದಾರಿಯನ್ನು ತೋರಿಸಲಿದ್ದು, ಇದು ಕಡಿಮೆ ವೆಚ್ಚದಾಯಕ. ಪ್ರಸ್ತುತ ಹಾಗೂ ಪರಿಸರ ಸ್ನೇಹಿ ಆಗಿದೆ. ಅಲ್ಲದೇ ಜೈವಿಕ ವೈದ್ಯಕೀಯ ಸಂಶೋಧನೆಯಲ್ಲಿ ಇದರ ಸಾಮರ್ಥ್ಯವೂ ಗಣನೀಯವಾಗಿದೆ ಎಂದು ಪ್ರೊ ಚೌಧರಿ ತಿಳಿಸಿದ್ದಾರೆ.


ಬಾಳೆ ನಾರು ಬಯೋ ಪಾಲಿಮಾರ್ ಸಂಯೋಜನೆಯು ಗಾಯಗಳು ಮಾಸುವಿಕೆಯಲ್ಲಿ ಡ್ರೆಸ್ಸಿಂಗ್ ಪರಿಣಾಮಕಾರಿಯಾಗಿದ್ದು, ಇದು ಪರಿಸರ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಹೊಂದಿದೆ ಎಂದು ತಂಡ ತಿಳಿಸಿದೆ. 


ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಬಯೋಲಾಜಿಕಲ್ ಮ್ಯಾಕ್ರಿಮೊಲೆಕ್ಯೂಲ್ಸ್‌ನಲ್ಲಿ ಪ್ರಕಟಿಸಲಾಗಿದೆ.

ಈ ಗಾಯದ ಡ್ರೆಸ್ಸಿಂಗ್ ಉತ್ಪನ್ನಗಳು ಗಾಯದ ಆರೈಕೆಯಲ್ಲಿ ಸುಸ್ಥಿರ ಪರಿಹಾರವನ್ನು ನೀಡುವ ಜೊತೆಗೆ ರೈತರಿಗೆ ಪ್ರಯೋಜನ ನೀಡಲಿದೆ. ಜೊತೆಗೆ ಪರಿಸರದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದಿಲ್ಲ.