-->

ನಾಯಿಗಳು ಬೈಕ್  ಕಾರುಗಳ ಹಿಂದೆ ಓಡಿ ಬರುವ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ?

ನಾಯಿಗಳು ಬೈಕ್ ಕಾರುಗಳ ಹಿಂದೆ ಓಡಿ ಬರುವ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ?


 

ರಾತ್ರಿಯ  ಸಮಯದಲ್ಲಿ ವಾಹನಗಳ ಸಂಖ್ಯೆ ತುಂಬಾ ಕಡಿಮೆಯಿದಾಗ  ಬೈಕ್ ಅಥವಾ ಕಾರ್ ಹೋಗುತ್ತಿದ್ದರೆ ಬೀದಿನಾಯಿಗಳು  ನಾಯಿಗಳು ವಾಹನಗಳ ಹಿಂದೆ  ಹಿಂಬಾಲಿಸುತ್ತವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ 


ರಾತ್ರಿ ಸಮಯ ಜನಸಂದಣಿ ಇಲ್ಲದ ರಸ್ತೆಯಲ್ಲಿ ಹೋಗುತ್ತಿರುವಾಗ ದಿಢೀರ್ ಅಂತ ನಾಯಿಗಳು ನಮ್ಮ ವಾಹನಗಳನ್ನು ಅಟ್ಟಿಸಿಕೊಂಡು ಬರುತ್ತವೆರೀತಿಯ ಅನುಭವ ಎಲ್ಲರಿಗೂ ಆಗಿರುತ್ತದೆ.   ನಾಯಿಗಳು ಇದ್ದಕ್ಕಿದ್ದಂತೆ ಬೈಕ್, ಸ್ಕೂಟ‌ರ್ ಅಥವಾ ಕಾರನ್ನು ಜೋರಾಗಿ ಬೊಗಳುತ್ತಾ ಹಿಂಬಾಲಿಸುತ್ತವೆ


ಬೀದಿ ನಾಯಿ ಬೆನ್ನಟ್ಟಿದಾಗವಾಹನವನ್ನು ವೇಗಗೊಳಿಸಿ  ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಸಮಯದಲ್ಲಿ ಅನೇಕ ಬಾರಿ ಅಪಘಾತಗಳು ಸಂಭವಿಸುತ್ತವೆ. 

ನಾಯಿಗಳು ಯಾಕೆ ಗಾಡಿಗಳ ಹಿಂದೆ ಓಡಿ ಬರುತ್ತವೆ: 
ನಾಯಿಗಳನ್ನು ಅತ್ಯಂತ ನಿಷ್ಠಾವಂತ ಪ್ರಾಣಿ ಆದರೂ ಬದ್ಧವೈರಿಗಳಂತೆ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು ಭಯ ಹುಟ್ಟಿಸುತ್ತವೆ. ತಮ್ಮ ಶಕ್ತಿಗೂ ಮೀರಿ ವೇಗವಾಗಿ ಓಡಿ ವಾಹನಗಳನ್ನು ಹಿಂಬಾಲಿಸುತ್ತವೆ. ಒಂದು ವೇಳೆ ನಿಮ್ಮ ಬಟ್ಟೆ ಸಿಕ್ಕರೆ ಮಾತ್ರ ಬಾರಿ ಕಷ್ಟ ಆಗುತ್ತದೆ 
ಈ ರೀತಿಯ ನಾಯಿಗಳ ಈ ವರ್ತನೆಗೆ ಮನುಷ್ಯರಾರು ಕಾರಣ ವಲ್ಲ ,ವಾಹನಗಳ ಟೈರ್ ವಾಸನೆಯಿಂದ ನಾಯಿಗಳು ಹಿಂಬಾಲಿಸುತ್ತವೆ. ನಾಯಿಗಳ ವಾಸನೆಯನ್ನು ಬಹಳ ಬೇಗನೆ ಹಿಡಿಯುತ್ತವೆ


ನಾಯಿಗಳು ತಮ್ಮ ವಾಸನೆಯನ್ನು ಇತರೆ ನಾಯಿಗಳಿಗೆ ರವಾನೆ ಮಾಡೋ ಉದ್ದೇಶದಿಂದ ವಿದ್ಯುತ್ ಕಂಬ ಅಥವಾ ವಾಹನಗಳ ಟೈರ್ ಮೇಲೆ ಮೂತ್ರ ಮಾಡುತ್ತವೆ. ರಾತ್ರಿ ವಾಹನಗಳು ಹೋಗುತ್ತಿರುವಾಗ ನಿಮ್ಮ ಟೈರ್ ಮೇಲಿರುವ ಬೇರೆ ನಾಯಿಯ ಮೂತ್ರದ ವಾಸನೆ ರಸ್ತೆಯಲ್ಲಿರುವ ಶ್ವಾನಗಳಿಗೆ ಬರುತ್ತದೆ. ಸಾಮಾನ್ಯವಾಗಿ ನಾಯಿಗಳು ತಮ್ಮ ಸೀಮಿತ ಪ್ರದೇಶಕ್ಕೆ ಬೇರೆಯೊಂದು ನಾಯಿ ಬರಲು ಬಿಡುವುದಿಲ್ಲ. ಹಾಗಾಗಿ ವಾಹನಗಳ ಹಿಂದೆ ನಾಯಿಗಳು ಓಡಿ ಬರುತ್ತವೆತಮ್ಮ ಪ್ರದೇಶದಲ್ಲಿ ಬೇರೆ ನಾಯಿಯ ಮೂತ್ರದ ವಾಸನೆ ಬರುತ್ತಿದ್ದಂತೆ ಅಂತಹ ವಾಹನಗಳನ್ನು ಹಿಂಬಾಲಿಸುತ್ತೇವೆ. 

ನೀವು ಭಯಗೊಂಡು ಗಾಡಿಯ ವೇಗ ಹೆಚ್ಚಿಸಿದ್ರೆ ನಾಯಿಗಳು ಮತ್ತಷ್ಟು ಆಕ್ರಮಣಕಾರಿಯಾಗುತ್ತವೆ ಎಂದು ವಿಜ್ಞಾನ ಹೇಳುತ್ತದೆಕೆಲವು ಸಂದರ್ಭಗಳಲ್ಲಿ ತಮ್ಮ ಜೊತೆಯಲ್ಲಿರೋ ನಾಯಿ ವಾಹನದ ಅಪಘಾತದಲ್ಲಿ ಮೃತವಾಗಿದ್ರೆ ಅಂತಹ ಗಾಡಿಗಳನ್ನು ನಾಯಿಗಳು ಗುರುತಿಸುವ ಸಾಮಾರ್ಥ್ಯವನ್ನು ಹೊಂದಿರುತ್ತವೆ. ಇಂತಹ ವಾಹನಗಳು ಬಂದರೆ ನಾಯಿಗಳು ಅವುಗಳನ್ನು ಸಹ ಹಿಂಬಾಲಿಸುತ್ತವೆ.

ರಸ್ತೆಯಲ್ಲಿ ಸಂಚರಿಸುವಾಗ ಜೋಪಾನ ವಾಗಿರಿ

Ads on article

Advertise in articles 1

advertising articles 2

Advertise under the article