-->
1000938341
ಕಾಗೆ ತಲೆಗೆ  ಕುಕ್ಕಿದ್ದರೆ ಏನ್ ಅರ್ಥ, ಕಾಗೆ ವಿಚಾರದಲ್ಲಿ  ತಿಳಿಯ ಬೇಕಾದ ಕೆಲವು ಆಸಕ್ತಿಕರ ವಿಷಯವನ್ನು ತಿಳಿಯಿರಿ

ಕಾಗೆ ತಲೆಗೆ ಕುಕ್ಕಿದ್ದರೆ ಏನ್ ಅರ್ಥ, ಕಾಗೆ ವಿಚಾರದಲ್ಲಿ ತಿಳಿಯ ಬೇಕಾದ ಕೆಲವು ಆಸಕ್ತಿಕರ ವಿಷಯವನ್ನು ತಿಳಿಯಿರಿ


ಕಾಗೆ ಎಲ್ಲರಿಗೂ ಪರಿಚಿತ ಪಕ್ಷಿ.
 ಕಾಗೆ ಎಲ್ಲರ ಜೀವನದ ಒಂದು ಅಂಗವಾಗಿದೆ. ಈ ಕಾಗೆ 
ಅಷ್ಟೇ ಅಲ್ಲದೆ  ಪೂರ್ವಜರ ಸಂಕೇತ ಎಂದೂ ನಂಬಲಾಗುತ್ತದೆ. ಹಾಗಾದರೆ ಕಾಗೆಯೆ 
ಬಗ್ಗೆ ತಿಳಿಯ ಬೇಕಾದ ಆಸಕ್ತಿದಾಯಕ ವಿಚಾರ ಇಲ್ಲಿದೆ

ಕಾಗೆಯನ್ನ  ಶನಿ ದೇವರ ವಾಹನ ಎನ್ನಲಾಗುತ್ತದೆ ಹಾಗಾಗಿ ನಮಗೆ ಅನೇಕ ಭಯವನ್ನ ಹುಟ್ಟಿಸುತ್ತದೆ.
 * ಕಾಗೆ ಹತ್ತಿರಕ್ಕೆ ಬಂದರೆ ನಮಗೆ ಬಹಳ ಭಯವಾಗುತ್ತದೆ. ಆದರೆ ಈ ಕಾಗೆ ಕೆಲವೊಮ್ಮೆ ಶುಭಫಲಗಳನ್ನ ನೀಡುತ್ತದೆ ಎನ್ನಲಾಗುತ್ತದೆ. 

 * ಈ ಕಾಗೆಯೂ ನಮ್ಮ ಭವಿಷ್ಯದ ಬಗ್ಗೆ ಸೂಚನೆಯನ್ನ ನೀಡುತ್ತದೆ ಎನ್ನುವ ನಂಬಿಕೆ ಇದೆ.
*  ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದಕ್ಕೆ ಕೆಟ್ಟ ಅರ್ಥಗಳೇ ಇರುವುದು. ಈ ರಿತಿ ಕಾಗೆ ಕುಟ್ಟುವುದು ಅಶುಭ ಎಂದರ್ಥ. 
* ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಎಂಬುದರ ಸೂಚನೆ ಎನ್ನಲಾಗುತ್ತದೆ.

* ಸದ್ಯದಲ್ಲಿ ಅಶುಭ ಸುದ್ದಿ ಕೇಳುವ ಸಂಭವವೂ ಇರುತ್ತದೆ. ಇದು ನಿಮ್ಮ ಜೀವನದ ಮೇಲೆ ಅನೇಕ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದೂ ನಂಬಲಾಗುತ್ತದೆ
ಈ ಕಾರಣಕ್ಕೆ ಕಾಗೆ ತಲೆ ಮೇಲೆ ಕುಕ್ಕಿ ಹೋಗುತ್ತದೆ ಎನ್ನುತ್ತಾರೆ ಹಿರಿಯರು. ಅಲ್ಲದೇ, ತಲೆಗೆ ಕಾಗೆ ಕುಕ್ಕಿದರೆ ಮನೆಯಲ್ಲಿ ನೋವಿನ ಘಟನೆ ನಡೆಯಬಹುದು.

* ಸಾವಿನ ಸುದ್ದಿ ಕೇಳುವಿರಿ ಎಂಬ ಸೂಚನೆ ಕಾಗೆ ನೀಡುತ್ತದೆ.ಕಾಗೆ ಈ ರೀತಿ.  ಕುಕ್ಕುವುದರ ಮೂಲಕ ಎಚ್ಚರಿಕೆ ನೀಡುತ್ತದೆ.
 * ಜೀವನದಲ್ಲಿ ಕಷ್ಟ ಕಾಲಾದ ಯೋಚನೆ  ನೀಡುತ್ತದೆ ಎಂದು ಕಾಗೆ ಸೂಚಿಸುತ್ತದೆ. 
ನಿಮಗೆ ಕಾಗೆ ಕುಕ್ಕಿದರೆ ಅದಕ್ಕೆ ಪರಿಹಾರ ಮಾಡುವ ಅಗತ್ಯ ಸಹ ಇದೆ. ಅಲ್ಲದೇ, ಕಾಗೆ ಕುಕ್ಕಿದ ನಂತರ ನೀವು ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಅನುಭವಿಸಬೇಕಾಗುತ್ತದೆ.

* ಕಾಗೆಯನ್ನ ಯಮನ ದೂತ ಎಂದು ಪರಿಗಣಿಸಲಾಗಿದೆ. ಹಾಗಾಗಿ ತಲೆಗೆ ಬಂದು ಕಾಗೆ ಕುಟ್ಟಿದರೆ ನಮ್ಮ ಜೀವಕ್ಕೂ ಸಹ ಅಪಾಯವಿದೆ ಎಂದರ್ಥ. 
* ಅಪ್ಪಿ-ತಪ್ಪಿ ಕಾಗೆ ನಿಮ್ಮ ತಲೆಗೆ ಕುಟ್ಟಿದರೆ ನಿಮಗೆ ಹಣಕಾಸಿನ ಸಮಸ್ಯೆಗಳು ಸಹ ಉಂಟಾಗಬಹುದು. ಇದರಿಂದ ನೀವು ಅಪಾರ ನಷ್ಟ ಸಹ ಅನುಭವಿಸಬಹುದು ಎನ್ನಲಾಗುತ್ತದೆ.

* ಇನ್ನು ಕಾಗೆ ಮನೆಯ ಹತ್ತಿರ ಬಂದು ಪದೇ ಪದೇ ಕೂಗುತ್ತಿದ್ದರೆ ಅದಕ್ಕೂ ಸಹ ಅರ್ಥವಿದೆ. ಮುಖ್ಯವಾಗಿ ಇದು ಹಿರಿಯರು ಕಳುಹಿಸಿರುವ ಸಂಕೇತ ಎನ್ನಲಾಗುತ್ತದೆ. ನಿಮಗೆ ಮುಂದಿನ ಅಪಾಯದ ಬಗ್ಗೆ ಸೂಚನೆ ನೀಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ.
 * ಮನೆಗೆ ಅತಿಥಿಗಳು ಬರುವುದನ್ನ ಸಹ ಈ ಕಾಗೆಗಳು ಸೂಚಿಸುತ್ತವೆ

ಕಾಗೆ ಕುಕ್ಕಿದರೆ ನೀವು ಎನ್ ಮಾಡ್ಬೇಕು 
ನಿಮ್ಮ ಕಾಗೆ ತಲೆಗೆ ಕುಕ್ಕಿದರೆ ಅದಕ್ಕೆ ಕೆಲ ಪರಿಹಾರ ಮಾಡಿ, ನೀವು ಕುಕ್ಕಿದ ತಕ್ಷಣ ಮನೆಗೆ ಬಂದು ತಲೆಸ್ನಾನ ಮಾಡಿ, ಮನೆಯಲ್ಲಿ ದೀಪ ಹಚ್ಚಿ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿ. 
ನಂತರ ಮತ್ತೊಂದು ದೊಡ್ಡ ಹಣತೆಯಲ್ಲಿ ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಈ ಮೂರು ಎಣ್ಣೆಗಳನ್ನ ಮಿಕ್ಸ್ ಮಾಡಿ, ಅದಕ್ಕೆ 5 ಬಣ್ಣದ ಬತ್ತಿಯನ್ನ ಹಾಕಬೇಕು. ಬಿಳಿ, ಕೆಂಪು, ಹಸಿರು, ನೀಲಿ, ಕಪ್ಪು ಬತ್ತಿಯನ್ನ ಹಾಕಿ ದೀಪವನ್ನ ದೇವಸ್ಥಾನದಲ್ಲಿ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು

Ads on article

Advertise in articles 1

advertising articles 2

Advertise under the article