-->

ಏಳು ತಿಂಗಳ ಗರ್ಭಿಣಿ ಮಾಡುವ ಕೆಲಸವೇ ಇದು?. ನೆಟ್ಟಿಗರಿಂದ ನಟಿ ಅಮಲಾ ಪೌಲ್ ತೀವ್ರ ತರಾಟೆಗೆ

ಏಳು ತಿಂಗಳ ಗರ್ಭಿಣಿ ಮಾಡುವ ಕೆಲಸವೇ ಇದು?. ನೆಟ್ಟಿಗರಿಂದ ನಟಿ ಅಮಲಾ ಪೌಲ್ ತೀವ್ರ ತರಾಟೆಗೆ
ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ಕಾಲಿವುಡ್‌ನ "ಮೈನಾ" ಸಿನಿಮಾ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. 

ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ ಪೌಲ್, ತಮ್ಮ ಗೆಳೆಯ ಜಗತ್ ದೇಸಾಯಿಯನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮಲಾ ಬೇಬಿ ಬಂಪ್‌ ಫೋಟೋ ಶೇರ್ ಮಾಡುವುದರೊಂದಿಗೆ 1+1 ನಿನ್ನೊಂದಿಗೆ 3 ಆಗಿದೆ ಎಂಬುದು ನನಗೀಗ ತಿಳಿದಿದೆ ಎಂದು ಬರೆದು ತಾವು ಗರ್ಭಿಣಿ ಆಗಿರುವ ಸಂಗತಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಮಲಾ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು.

ವಿಶೇಷವೇನೆಂದರೆ, 7 ತಿಂಗಳ ಗರ್ಭಿಯಾಗಿರುವ ಅಮಲಾ ಪಾರ್ಟಿಯಲ್ಲಿ ಪತಿಯೊಂದಿಗೆ ಡಾನ್ಸ್ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಆದರೆ ಇದಕ್ಕೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಗು ಹೆರುವುದು ಅಂದರೆ ಸುಮ್ಮನೇ ಅಲ್ಲ. ಪ್ರತಿ ಮನೆಯಲ್ಲಿ ಗರ್ಭಿಣಿಯರನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಲಾಗುತ್ತದೆ. ಭಾರವನ್ನು ಹೊರುವುದಾಗಲಿ ಅಥವಾ ಕಠಿಣ ಕೆಲಸಗಳನ್ನಾಗಲಿ ಮಾಡಿಸುವುದಿಲ್ಲ. ಅದರಲ್ಲೂ ಹೆರಿಗೆಗೆ ಹತ್ತಿರ ಇರುವ ಸಮಯದಲ್ಲಂತೂ ತಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಾಗುತ್ತದೆ.

ಆದರೆ, ಅಮಲಾ ಅವರು ಕ್ಲಬ್ ಒಂದರಲ್ಲಿ ಪತಿಯೊಂದಿಗೆ ಹಿಗ್ಗಾಮುಗ್ಗಾ ಡಾನ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರು ಇದನ್ನು ಖಂಡಿಸಿದ್ದಾರೆ. ನಿಮ್ಮ ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ನೀವು ಈ ರೀತಿ ಮಾಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಅಮಲಾಗೆ ಬೆಂಬಲ ವ್ಯಕ್ತಪಡಿಸಿದ್ದು, ನಿಮಗೆ ಒಳ್ಳೆಯದಾಗಲಿ, ನಿಮ್ಮ ಜೀವನ ಹೀಗೆ ಪ್ರತಿಕ್ಷಣ ಸಂತಸದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.

Ads on article

Advertise in articles 1

advertising articles 2

Advertise under the article