-->

ಕೈಗೆಟಕುವ ದರದಲ್ಲಿ ಸಿಗಲಿದೆ 5ಜಿ ಫೋನ್ !

ಕೈಗೆಟಕುವ ದರದಲ್ಲಿ ಸಿಗಲಿದೆ 5ಜಿ ಫೋನ್ !ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮುಂದಾದ ರಿಲಯನ್ಸ್ ನ ಜಿಯೋ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ.

 ಇದರ ಮುಂದುವರಿದ ಭಾಗವಾಗಿ ಈ ಬಾರಿ ಕಡಿಮೆ ಬೆಲೆಯ 5G ಸ್ಮಾರ್ಟ್‌ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಈ ವರ್ಷದ ಕೊನೆಯಲ್ಲಿ ರಿಲಯನ್ಸ್ ಜಿಯೋ ಮತ್ತು ಕ್ವಾಲ್ಯಾಮ್ 8000ರೂ.ಗಿಂತ ಕಡಿಮೆ ಬೆಲೆಯ 5 ಜಿ ಫೋನ್ ಅನ್ನು ಪ್ರಾರಂಭಿಸಬಹುದು ಎಂದು ಮೂಲಗಳಿಂದ ತಿಳಿದು ಬರುತ್ತಿದೆ .

ಹೊಸ ಸಾಧನವು ಭಾರತದಲ್ಲಿ 250 ಮಿಲಿಯನ್ 2ಜಿ ಮತ್ತು 3ಜಿ ಬಳಕೆದಾರರು ಸುಲಭವಾಗಿ 4ಜಿ ಮತ್ತು 5ಜಿಗೆ ಶಿಫ್ಟ್ ಆಗಲು ನೆರವಾಗುತ್ತದೆ. ಕೇವಲ 9000 ರೂ.ಗೆ ಈ ಮೊಬೈಲ್ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಜಿಯೋದ ಕೈಗೆಟುಕುವ 5ಜಿ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಹಲವು ವಿಚಾರ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಜಿಯೋ 5ಜಿ ಫೋನ್‌ಗೆ ಸಂಬಂಧಿಸಿದ ಹಲವಾರು ವಿಷಯಗಳು ಕಾಣಿಸಿಕೊಂಡಿವೆ.

ಆದರೆ ಕ್ವಾಲ್ಕಾಮ್‌ನಲ್ಲಿ ಎಸ್‌ವಿಪಿ ಮತ್ತು ಕ್ವಾಲ್ಕಾಮ್‌ನ ಹ್ಯಾಂಡ್‌ಸೆಟ್‌ಗಳ ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಅವರ ಮಾತಿನಂತೆ ಕಡಿಮೆ ಬೆಲೆಯ ಮೊಬೈಲ್ ಶೀಘ್ರ ಜನರ ಕೈಗೆ ಸಿಗಲಿವೆ ಎನ್ನುತ್ತಾರೆ.

'ಹೊಸ ಚಿಪ್‌ಸೆಟ್‌ನೊಂದಿಗೆ, ಕೈಗೆಟುಕುವ ಸ್ಮಾರ್ಟ್‌ ಫೋನ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸಂಪೂರ್ಣ 5ಜಿ ಅನುಭವವನ್ನು ನೀಡಲು ನಾವು ಮುಂದಾಗಿದ್ದೇವೆ. 4ಜಿ ಮತ್ತು 5ಜಿ ನಡುವಿನ ಪರಿವರ್ತನೆಯ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ' ಎಂದು ಕ್ರಿಸ್ ಹೇಳಿದರು.

Ads on article

Advertise in articles 1

advertising articles 2

Advertise under the article