-->

ಆಸ್ಕರ್ ಪ್ರಶಸ್ತಿ- 2024: ಪ್ರಶಸ್ತಿ ಘೋಷಣೆಗೆ ಬೆತ್ತಲಾಗಿ ವೇದಿಕೆಯೇರಿದ ಹಾಲಿವುಡ್ ನಟ ಜಾನ್ ಸೀನಾ

ಆಸ್ಕರ್ ಪ್ರಶಸ್ತಿ- 2024: ಪ್ರಶಸ್ತಿ ಘೋಷಣೆಗೆ ಬೆತ್ತಲಾಗಿ ವೇದಿಕೆಯೇರಿದ ಹಾಲಿವುಡ್ ನಟ ಜಾನ್ ಸೀನಾ


ಲಾಸ್ ಏಜೆಂಲಿಸ್: ಆಸ್ಕರ್- 2024ರ ಪ್ರಶಸ್ತಿ ಸಮಾರಂಭ ಎಲ್ಲರ ಗಮನಸೆಳೆಯುತ್ತಿದೆ. ಯಾರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಲಿದೆ ಎಂಬ ನಿರೀಕ್ಷೆಗಳು ಸಿನಿಪ್ರೇಕ್ಷಕರಲ್ಲಿ ಹೆಚ್ಚಿದೆ. ಈ ಮಧ್ಯೆ ವೇದಿಕೆಗೆ ಬೆತ್ತಲಾಗಿ ಬಂದ ಜನಪ್ರಿಯ ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾ‌ರ್, ಹಾಲಿವುಡ್ ನಟ ಜಾನ್ ಸೀನಾ ನೋಡುಗರು ಹುಬ್ಬೇರುವಂತೆ ಮಾಡಿದ್ದಾರೆ. ಅವರು ಬೆತ್ತಲಾಗಿ ಬಂದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗುತ್ತಿದೆ.

ಅತೀ ಹೆಚ್ಚು ನಿರೀಕ್ಷಿತ ಪ್ರಶಸ್ತಿಗಳಲ್ಲಿ ಒಂದಾದ ಬೆಸ್ಟ್ ಕಾಸ್ಟ್ಯುಮ್ ಡಿಸೈನ್ ಪ್ರಶಸ್ತಿ ಘೋಷಿಸಲು ಜಾನ್ ಸೀನಾ,   ವೇದಿಕೆಗೆ ಬೆತ್ತಲಾಗಿ ಆಗಮಿಸಿದ್ದಾರೆ. ಅವರು ವಿಭಿನ್ನ ರೀತಿ ಮೋಡಿ ಮಾಡಲೆಂದು ನಗ್ನವಾಗಿ ಮೈಕ್ ಮುಂದೆ ನಿಂತು ಮಾತಾಡಿರುವುದು ಸದ್ಯ ನೆಟ್ಟಿಗರನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಧೈರ್ಯದಿಂದ ಬಟ್ಟೆಯಿಲ್ಲದೆ ವೇದಿಕೆಯ ಮೇಲೆ ಹೋದ ಜಾನ್ ಸೀನ್ ಅವರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಆತಿಥೇಯ ಜಿಮ್ಮಿ ಕಿಮ್ಮೆಲ್ ಹಾಗೂ ಜಾನ್ ಸೀನಾ ಅವರ ತಮಾಷೆಯು ನೋಡುಗರನ್ನು ಮೋಡಿ ಮಾಡಿದ್ದು, ಜಾನ್ ವೇಷಭೂಷಣದ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಗಣ್ಯರ ಮುಂದೆ ಮಾತುಕತೆ ನಡೆಸಿದ್ದಾರೆ. ಆಸ್ಕರ್ ಪ್ರಶಸ್ತಿ 2024ರ ಸಾಲಿನಲ್ಲಿ ಈ ಬಾರಿ ಹೆಚ್ಚುವರಿ ಅವಾರ್ಡ್‌ಗಳು ಓಪನ್‌ಹೈಮರ್ ಚಿತ್ರಕ್ಕೆ ಒಲಿದುಬಂದಿರುವುದು ಮತ್ತಷ್ಟು ವಿಶೇಷವಾಗಿದೆ.

Ads on article

Advertise in articles 1

advertising articles 2

Advertise under the article