-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸದ್ಯದಲ್ಲಿ ಬರಲಿದೆ ಕ್ಯಾನ್ಸರ್ ಗೆ ಮದ್ದು ಇಲಿಗಳ ಮೇಲಿನ ಪ್ರಯೋಗ ಯಶಸ್ವಿ ,ಸಕ್ಸಸ್ ಆದ್ರೆ 100ರೂ.ಗೆ ಸಿಗಲಿದೆ ಕ್ಯಾನ್ಸ‌ರ್ ಮಾತ್ರೆ

ಸದ್ಯದಲ್ಲಿ ಬರಲಿದೆ ಕ್ಯಾನ್ಸರ್ ಗೆ ಮದ್ದು ಇಲಿಗಳ ಮೇಲಿನ ಪ್ರಯೋಗ ಯಶಸ್ವಿ ,ಸಕ್ಸಸ್ ಆದ್ರೆ 100ರೂ.ಗೆ ಸಿಗಲಿದೆ ಕ್ಯಾನ್ಸ‌ರ್ ಮಾತ್ರೆ


ನವದೆಹಲಿ: ಆರ್ ಪ್ಲಸ್ ಸಿಯು ಎಂಬ ಹೆಸರಿನಲ್ಲಿ ಮುಂಬೈನ ಟಿಎಂಸಿ ಸಂಶೋಧಕರು ಈ ಮಾತ್ರೆಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಇದರಲ್ಲಿ ತಾಮ್ರದ ಪ್ರೊ ಆಕ್ಸಿಡೆಂಟ್ ಮತ್ತು ರೆಸ್ಪೆರಾಟ್ರೊಲ್ ಸಂಯೋಜನೆ ಇದೆ. ಇದು ಕ್ಯಾನ್ಸರ್ ಮರುಕಳಿಸುವುದನ್ನು ತಡೆಯಲು ಹೊಟ್ಟೆಯಲ್ಲಿ ಆಕ್ಸಿಜನ್ ರಾಡಿಕಲ್‌ಗಳನ್ನು ಉತ್ಪಾದಿಸುತ್ತದೆ.

ಟಾಟಾ ಮೆಮೊರಿಯಲ್ ಸೆಂಟರ್ ಅಭಿವೃದ್ಧಿ ಪಡಿಸಿರುವ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ 100 ರೂ. ಮಾತ್ರೆಯ ಸಾಮರ್ಥ್ಯ ಕುರಿತು ಮಾನವರ ಮೇಲಿನ ಪ್ರಯೋಗ ಸಾಬೀತು ಆಗಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಲಿಗಳ ಮೇಲೆ ನಡೆಸಿದ ಅಧ್ಯಯನಲ್ಲಿ ಕ್ಯಾನ್ಸರ್ ರೋಗಿಗಳ ಗಣನೀಯ ಪ್ರಮಾಣದಲ್ಲಿ ಗುಣಪಡಿಸುವಿಕೆಗೆ ತೋರಿಸಿದೆ. ಆದರೆ, ಇದು ಕ್ಯಾನ್ಸರ್‌ಗೆ ಪರಿಹಾರವಲ್ಲ ಎಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಮೆಡಿಕಲ್ ಅಂಕೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ ಶ್ಯಾಮ್ ಅಗರ್ ವಾಲ್ ತಿಳಿಸಿದ್ದಾರೆ.

ಇನ್ನು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ಐಎಂಎ ಕೋವಿಡ್ ಟಾಸ್ಕ್ ಫೋರ್ಸ್‌ನ ಸಹ ಮುಖ್ಯಸ್ಥೆ ಡಾ ರಾಜೀವ್ ಜಯದೇವ್, ಇದು ಆಸಕ್ತಿದಾಯಕ ಪ್ರಶಂಸಾರ್ಹವಾಗಿದೆ. ಆದರೆ, ಇದನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಹಾರದ ನಿಟ್ಟಿನಲ್ಲಿ ನೋಡಲಾಗುವುದಿಲ್ಲ ಎಂದಿದ್ದಾರೆ.

ಹೇಗೆ ಕೆಲಸ ಮಾಡಲಿದೆ ಈ ಮಾತ್ರೆ: 
ತಾಮ್ರ ಮತ್ತು ರೆಸ್ಪೆರಾಟ್ರೊಲ್ ಸಂಯೋಜನೆ ಬಳಕೆ ಜೀವಕೋಶ-ಮುಕ್ತ ಕ್ರೋಮಾಟಿನ್ ಅನ್ನು ಕುಗ್ಗಿಸುತ್ತದೆ. ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಇನ್ನೂ ಮಾನವನ ಮೇಲಿನ ಅಧ್ಯಯನ ಸಾಗಿದೆ. ಈ ಅಧ್ಯಯನವು ತಿಳಿಸುವಂತೆ, ಮಾತ್ರೆಗಳು ಕಿಮೊಥೆರಪಿಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಅರ್ಧದಷ್ಟು ಕಡಿಮೆ ಮಾಡುತ್ತವೆ. ಜೊತೆಗೆ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆಯನ್ನು ಶೇ 30ರಷ್ಟು ಕಡಿಮೆ ಮಾಡುತ್ತವೆ.

ಸಂಶೋಧಕರು ಬಳಕೆ ಮಾಡಿರುವ ತಾಮ್ರ ಮತ್ತು ರೆಸ್ಟೆರಾಟ್ರೊಲ್‌ನ ಪ್ರೊ ಆಕ್ಸಿಡೆಂಟ್ ಸಂಯೋಜನೆ ಆಕ್ಸಿಜನ್ ರಾಡಿಕಲ್‌ಗಳನ್ನು ಉತ್ಪಾದಿಸುವ ಮೂಲಕ ಡಿಎನ್‌ಎಗೆ ಹಾನಿ ಮಾಡಲು ಬಳಕೆ ಮಾಡುತ್ತದೆ ಎಂದು ಡಾ ರಾಜೀವ್ ಜಯದೇವನ್ ತಿಳಿಸಿದ್ದಾರೆ.
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಒಂದು ದೊಡ್ಡ ಪ್ರಗತಿ. ಭಾರತೀಯ ಸಂಶೋಧಕರು ಇತಿಹಾಸ ಸೃಷ್ಟಿಸುತ್ತಿದ್ದಾರೆ. ಈ ಮಾತ್ರೆ ಪರಿಣಾಮಕಾರಿ ಕೆಲಸ ಮಾಡಿದರೆ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಗುರುಗಾವ್‌ನ ಫೋರ್ಟಿಸ್ ಮೆಮೋರಿಯನ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ ರಾಹುಲ್ ಭಾರ್ಗವ ತಿಳಿಸಿದ್ದಾರೆ.

ಮಾತ್ರೆಗಳು ಭರವಸೆದಾಯಕ ಸಾಮರ್ಥ್ಯದ ಪರಿಣಾಮವನ್ನು ತೋರಿಸಿವೆ. ಆದರೆ, ಮಾನವ ಪ್ರಯೋಗ ಪೂರ್ಣಗೊಳ್ಳಬೇಕಿದೆ. ಇದಕ್ಕೆ ಐದು ವರ್ಷ ಸಮಯ ಹಿಡಿಯಲಿದೆ ಎಂದರು.

Ads on article

Advertise in articles 1

advertising articles 2

Advertise under the article

ಸುರ