-->

ಶಾಂತಿ ಕ್ರಾಂತಿ ಸಿನಿಮಾ ಮಾಡಿ 10ಕೋಟಿ ರೂ. ಕಳೆದುಕೊಂಡೆ ಆಗ ತಂದೆಗೊಂದು ಮಾತು ಕೊಟ್ಟೆ - ವಿ.ರವಿಚಂದ್ರನ್

ಶಾಂತಿ ಕ್ರಾಂತಿ ಸಿನಿಮಾ ಮಾಡಿ 10ಕೋಟಿ ರೂ. ಕಳೆದುಕೊಂಡೆ ಆಗ ತಂದೆಗೊಂದು ಮಾತು ಕೊಟ್ಟೆ - ವಿ.ರವಿಚಂದ್ರನ್


ಕೊಪ್ಪಳ: ಕನ್ನಡ ಸಿನಿಮಾ ನಟ, ನಿರ್ದೇಶಕ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು 80ರ ದಶಕದಲ್ಲಿ ನೀಡಿದ್ದ ಸೂಪರ್‌ಡೂಪ‌ರ್ ಹಿಟ್ ಸಿನಿಮಾ 'ಪ್ರೇಮಲೋಕ'ದ ಮುಂದುವರಿದ ಭಾಗದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು. ಮೇ 30ರಂದು ಈ ಸಿನಿಮಾ ಚಿತ್ರೀಕರಣ ಪ್ರಾರಂಭಿಸುತ್ತೇನೆ ಎಂದಿದ್ದಾರೆ.

“ಪ್ರೇಮಲೋಕ 2' ಬಗ್ಗೆ ಮಾತನಾಡಿದ ಕ್ರೇಜಿಸ್ಟಾ‌ರ್ ವಿ. ರವಿಚಂದ್ರನ್, 1886ರಲ್ಲಿ ನನ್ನ ವೇಗವನ್ನು ತಡೆಯಲು ಆಗ್ತಿರಲಿಲ್ಲ. 86ರಲ್ಲಿ ಪ್ರೇಮಲೋಕ ಪ್ರಾರಂಭಿಸಿ, 87ರಲ್ಲಿ ಮುಗಿಸಿದೆ. ಇದರ ಹಿಂದೆಯೇ ಶಾಂತಿ-ಕ್ರಾಂತಿ ಮಾಡಿದೆ. ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಿದ ಈ ಸಿನಿಮಾಕ್ಕಾಗಿ 10 ದಿನಗಳ ಚಿತ್ರೀಕರಣ ಮುಗಿಸಿದೆ. ಆದರೆ ಮಧ್ಯೆದಲ್ಲಿ ಇದು ಯಾಕೋ ಕೈತಪ್ಪುತ್ತಿದೆ, ಸರಿಹೋಗುತ್ತಿಲ್ಲ ಎಂದು ನನ್ನ ತಂದೆಗೆ ತಿಳಿಸಿದೆ. ಆಗ ಅವರು ಯಾವುದೇ ಕಾರಣಕ್ಕೂ ನಿಲ್ಲಿಸಬೇಡ, ಮುಂದುವರೆಸು” ಎಂದರು.

ಜನರಿಗೆ ಮೋಸ ಮಾಡಬಾರದು. ಸಿನಿಮಾ ಆರಂಭಿಸಿದ್ದಿ ಮುಗಿಸು. ನಿನ್ನನ್ನು ನಂಬಿ ರಜನಿಕಾಂತ್, ನಾಗಾರ್ಜುನ್ ಡೇಟ್ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ಇಡಬೇಡ” ಎಂದು ನಮ್ಮ ತಂದೆ ಹೇಳಿದರು. ಈ ಸಿನಿಮಾ ನಾವು ಅಂದುಕೊಂಡಂತೆ ಆಗೋದಿಲ್ಲ ದು ಗೊತ್ತಿದ್ರು ಮುಗಿಸಿದೆ. ಆದ್ದರಿಂದ 10 ಕೋಟಿ ರೂ. ಕಳೆದುಕೊಂಡೆ. ಅಂದು ನಾನು ಮಾಡಿದ ಅಷ್ಟು ಸಂಪಾದನೆಯನ್ನೇ ಕಳ್ಕೊಂಡೆ ಎಂದು ಹೇಳಿದರು.

“ಸಿನಿಮಾ ನೋಡಿದ ನಮ್ಮ ತಂದೆ ಆಗ ಆಸ್ಪತ್ರೆಯಲ್ಲಿದ್ದರು. ಆದ್ರೂ ಶಾಂತಿ-ಕ್ರಾಂತಿ ತೋರಿಸಿದೆ. ನಿನ್ನ ತಪ್ಪು ನಿನಗೆ ಗೊತ್ತಾದರೆ ಸಾಕು ಎಂದರು. ಆದರೂ ನೀನೊಬ್ಬ ಒಳ್ಳೆಯ ನಿರ್ದೇಶಕ ಕಣೋ ಎಂದರು. ಆ ಕ್ಷಣವೇ ನಾನು ನಮ್ಮ ಅಪ್ಪನಿಗೆ ಒಂದು ಮಾತು ಕೊಟ್ಟೆ, ನನ್ನ ಸೋಲು ನೋಡಿ, ಅವರನ್ನು ಅಳುತ್ತ ಕಳಿಸಿಕೊಡಬಾರದು ಎಂದು ನಿರ್ಧರಿಸಿ, 'ರಾಮಾಚಾರಿ' ಮಾಡಿ, ಸಕ್ಸಸ್ ಕಂಡೆ. ಅದನ್ನು ತಂದೆಗೆ ತೋರಿಸಿ, ಅವರನ್ನು ಖುಷಿಯಿಂದಲೇ ಕಳಿಸಿಕೊಟ್ಟೆ ಎಂದು ರವಿಚಂದ್ರನ್ ಹೇಳಿದರು.

Ads on article

Advertise in articles 1

advertising articles 2

Advertise under the article