ವಿಶ್ವದಾಖಲೆ ಸೃಷ್ಟಿಸಿದ ನಾಲ್ಕು ತಿಂಗಳ ಶಿಶು: ಆಶ್ಚರ್ಯವಲ್ಲವೇ...!


ನವದೆಹಲಿ: ಶಿಶುವೊಂದು ಯಾರದರೂ ಹೇಳಿದ್ದನ್ನು ಗ್ರಹಿಸಲು ಸರಿಸುಮಾರು ಒಂದು ವರ್ಷವಾದರೂ ಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಇಲ್ಲೊಂದು ಮಗು 4ತಿಂಗಳಿಗೆ ತಾಯಿ ಹೇಳುವುದನ್ನು ಗ್ರಹಿಸಿ ವಿಶ್ವದಾಖಲೆ ಮಾಡಿದೆ ಎಂದು ಹೇಳಿದರೆ ನಂಬುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಇದು ಸತ್ಯ.

ಎನ್‌ಟಿಆ‌ರ್ ಜಿಲ್ಲೆಯ ನಂದಿಗಾಮಾದ 4ತಿಂಗಳ ಮಗುವೊಂದು ಒಂದಲ್ಲ, ಎರಡಲ್ಲ  ಬರೋಬ್ಬರಿ 120 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಇಲ್ಲಿನ ರಮೇಶ್ ಮತ್ತು ಹೋಮ ದಂಪತಿಯ ಪುತ್ರಿ ಕೈವಲ್ಯ, 4 ತಿಂಗಳಲ್ಲೇ 120 ಬಗೆಯ ಪಕ್ಷಿಗಳು, ತರಕಾರಿಗಳು, ಹಣ್ಣುಗಳು, ಪ್ರಾಣಿಗಳು ಮತ್ತು ಹೂವುಗಳ ಫೋಟೋಗಳನ್ನು ನೆನಪಿಟ್ಟುಕೊಂಡು ಗುರುತಿಸುತ್ತದೆ.


ಈ ಶಿಶುವಿನ ದೃಷ್ಟಿ ಸುಧಾರಿಕೆಗೆ ಆಪ್ತ ಸ್ನೇಹಿತರು ಹೇಳಿದಂತೆ ಮಗುವಿನ ತಾಯಿ ಕಪ್ಪು ಮತ್ತು ಬಿಳಿ ಕಾರ್ಡ್‌ಗಳನ್ನು ತೋರಿಸಲು ಪ್ರಾರಂಭಿಸಿದ್ದಾರೆ. ತನ್ನ ಪುತ್ರಿ ಕಾರ್ಡುಗಳನ್ನು ತದೇಕಚಿತ್ತದಿಂದ ನೋಡುತ್ತಿರುವುದನ್ನು ನೋಡಿ ಮಗುವಿನ ತಾಯಿ ಹೊಸ ಪ್ರಯೋಗ ಮಾಡಲು ಶುರು ಮಾಡಿದರು.

ಇದನ್ನು ಗಮನಿಸಿದ ಪೋಷಕರು ಅದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಿದ್ದಾರೆ. ತನ್ನ ಮಗುವಿನ ಪ್ರತಿಭೆಯನ್ನು ಹೊರತರಬೇಕೆಂದು ನೊಬೆಲ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಿದ ಬಳಿಕ ಅವರು ಮಗುವಿನ ವೀಡಿಯೊವನ್ನು ಕಳುಹಿಸಲು ಸೂಚಿಸಿದೆ. ಮಗುವಿನ ಗುರುತಿಸಬಹುದಾದ ಆಟಿಕೆಗಳ ವಿಡಿಯೋಗಳನ್ನು ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಲಾಗಿದೆ.. ಒಂದು ವಾರದಲ್ಲಿ ಮಗುವಿನ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಳಿಗೆ ಆಯ್ಕೆ ಮಾಡಲಾಗಿದೆ.