ಬೆಳಗೆದ್ದು ಹಲ್ಲು ಉಜ್ಜದೆ ನೀರು ಕುಡಿದರೆ ಆಗುವ ಪ್ರಯೋಜನವೇನು, ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸುವುದು ಹೇಗೆ


ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿದರೆ ಅದರಿಂದ ಹತ್ತು ಹಲವು ರೀತಿಯ ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ ಎಂದು ತಿಳಿದಿದ್ದೇವೆ.

ಆದರೂ ಸಹ  ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎನ್ನುವ ಗೊಂದಲವು ನಮ್ಮನ್ನು ಕಾಡುತ್ತಾ ಇರುತ್ತದೆ.
ಕೇವಲ ನೀರನೇ ಕುಡಿಯಬೇಕು ಎಂದು ಇಲ್ಲ ಗಿಡಮೂಲಿಕೆ ಚಾ, ಎಳನೀರು ಮತ್ತು ಲಿಂಬೆ ನೀರನ್ನು ಕುಡಿಯಬಹುದು.

ದೇಹವನ್ನು ದಿನಪೂರ್ತಿ ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ  ಮುಖ್ಯ ಇದಕ್ಕಾಗಿ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಒಳ್ಳೆಯದು . ಹಲ್ಲುಜ್ಜುವ ಮೊದಲು ನೀರು ಕುಡಿಬೇಕು.ಬೆಳಗ್ಗೆ ಎದ್ದ ಕೂಡಲೇ 650 ಮಿ.ಲೀ. ನೀರನ್ನು ಕುಡಿದ್ದಾರೆ ಉತ್ತಮ.

 ದಿನ ಕಳೆದಂತೆ ಇದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕು.  ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುತ್ತದೆ
ಚಯಾಪಚಯ ವೃದ್ಧಿ
ನಿದ್ರೆಯಿಂದ ಎದ್ದ ಬಳಿಕ ನೀರು ಕುಡಿದರೆ ಆಗ ದೇಹವು ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ ದೇಹದ ಎಲ್ಲಾ ಕಾರ್ಯಗಳು ಸರಿಯಾದ ರೀತಿಯಲ್ಲಿ ಆಗುವಂತೆ ಮಾಡುವುದು. ಜೀರ್ಣಕ್ರಿಯೆ, ಪೋಷಕಾಂಶಗಳ ಹೀರುವಿಕೆ ಮತ್ತು ಶಕ್ತಿಯ ಮಟ್ಟ ಹೆಚ್ಚಲು ಇದು ಸಹಕಾರಿ.

ದ್ರವಾಂಶದ ನಷ್ಟ ತುಂಬಿಸುವುದು : 
ರಾತ್ರಿ ನಿದ್ರೆಯಲ್ಲಿ ಉಸಿರಾಟ ಮತ್ತು ಇತರ ಕೆಲವು ದೈಹಿಕ ಕ್ರಿಯೆಯಿಂದ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುವುದು. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಆಗ ದೇಹದಲ್ಲಿ ದ್ರವಾಂಶವು ಸಮತೋಲನದಲ್ಲಿ ಇರುವುದು ಮತ್ತು ನಿರ್ಜಲೀಕರಣವು ದೂರವಾಗುವುದು.

ಮೆದುಳಿನ ಪ್ರದರ್ಶನ ವೃದ್ಧಿ : 
ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿದೆ ಅದರಿಂದ ಮನಸ್ಥಿತಿ ಸುಧಾರಣೆ ಆಗುವುದು, ಏಕಾಗ್ರತೆಗೆ ಇದು ಸಹಕಾರಿ. ನರವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ದೇಹವು ತೇವಾಂಶದಿಂದ ಇರಬೇಕು. ದೇಹದಲ್ಲಿ ನೀರಿನಾಂಶವು ಸರಿಯಾಗಿದ್ದರೆ ಆಗ ಮೆದುಳು ಕೂಡ ಕ್ರಿಯಾತ್ಮಕವಾಗಿ ಕೆಲಸ ಮಾಡುವುದು.

ದೇಹ ನಿರ್ವಿಷಗೊಳಿಸುವುದು : 
ನಿದ್ರೆಯಿಂದ ಎದ್ದ ಕೂಡಲೇ ನೀರು ಕುಡಿದರೆ ಅದು ರಾತ್ರಿ ವೇಳೆ ದೇಹದಲ್ಲಿ ಜಮೆ ಆಗಿರುವ ವಿಷಕಾರಿ ಅಂಶಗಳು ಮತ್ತು ಕಲ್ಮಷವನ್ನು ಹೊರಗೆ ಹಾಕಲು ಸಹಕಾರಿ ಆಗುವುದು. ಇದು ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸುವುದು. ಯಕೃತ್ ನ್ನು ನಿರ್ವಿಷ ಗೊಳಿಸಲು, ಕಿಡ್ನಿ ಕಾರ್ಯ ಉತ್ತಮಗೊಳಿಸಲು ಮತ್ತು ಸಂಪೂರ್ಣ ದೇಹದಲ್ಲಿ ವಿಷಕಾರಿ ಅಂಶವನ್ನು ಹೊರಹಾಕಲು ಸಹಕಾರಿ.

ಕಾಂತಿಯುತ ತ್ವಚೆ ವೃದ್ಧಿ : 
ತ್ವಯು ಕಾಂತಿಯುತವಾಗಿರಬೇಕಾದರೆ ಆಗ ದೇಹವನ್ನು ತೇವಾಂಶದಿಂದ ಇಡುವುದು ಅತ್ಯಗತ್ಯ. ಬೆಳಗ್ಗೆ ಎದ್ದು ನೀರು ಕುಡಿದರೆ ಅದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಉತ್ತಮವಾಗುವುದು ಮತ್ತು ಚರ್ಮಕ್ಕೆ ಮೊಶ್ಚಿರೈಸ್ ಆಗಿ ಕೆಲಸ ಮಾಡುವುದು. ತೇವಾಂಶವು ಉತ್ತಮ ಮಟ್ಟದಲ್ಲಿ ಇದ್ದರೆ ಆಗ ಇದು ಒಣಚರ್ಮದ ಸಮಸ್ಯೆ ಕಡಿಮೆ ಮಾಡಿ, ನೆರಿಗೆ ನಿವಾರಿಸಿ ಕಾಂತಿ ನೀಡುವುದು.

ಪ್ರತಿರೋಧಕ ಶಕ್ತಿ ವೃದ್ಧಿ
ಪ್ರತಿರೋಧಕ ಶಕ್ತಿಯು ಸರಿಯಾಗಿದ್ದರೆ ಆಗ ನಾನಾ ರೀತಿಯ ಅನಾರೋಗ್ಯಗಳು ದೂರವಾಗುವುದು. ನಿದ್ರೆಯಿಂದ ಎದ್ದ ಕೂಡಲೇ ನೀರು ಕುಡಿದರೆ ಆಗ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಪ್ರತಿರೋಧಕ ವ್ಯವಸ್ಥೆಗೆ ಬೇಕಾಗಿರುವ ದುಗ್ದರಸ ಪರಿಚಲನೆಯನ್ನು ಇದು ವೃದ್ಧಿಸುವುದು. ಪ್ರತಿರೋಧಕ ಶಕ್ತಿಯು ಪ್ರಬಲವಾಗಿದ್ದರೆ ಸೋಂಕು, ಅನಾರೋಗ್ಯ ದೂರವಿಡಬಹುದು.

ನೀರಿನ ಪ್ರಮಾಣ ಹೆಚ್ಚಿಸುವುದು ಹೇಗೆ :
• ನೀರನ್ನು ಕುಡಿಯುವುದು ನಿಮಗೆ ಇಷ್ಟವಿಲ್ಲದೆ ಇದ್ದರೆ ಆಗ ನೀವು ಎಳನೀರು, ಗಿಡಮೂಲಿಕೆ ಚಹಾ ಅಥವಾ ಗಿಡಮೂಲಿಕೆ, ಸೌತೆಕಾಯಿ ಮತ್ತು ಕೆಲವು ಹಣ್ಣುಗಳನ್ನು ಬಳಸಿಕೊಂಡು ತಯಾರಿಸಿದ ನಿರ್ವಿಷಕಾರಿ ನೀರನ್ನು ಕುಡಿಯಬಹುದು.

• ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಲಿಂಬೆ ಹಿಂಡಿಕೊಂಡು ಕುಡಿದರೂ ಅದು ಚಯಾಪಚಯ ವೃದ್ಧಿಸಿ, ತೂಕ ಇಳಿಸುವುದು. ಸಂಪೂರ್ಣ ಆರೋಗ್ಯ ಕಾಪಾಡಲು ನೀವು ನಿತ್ಯವೂ ಸರಿಯಾಗಿ ನೀರು ಕುಡಿಯಬೇಕು. ಎದ್ದ ಕೂಡಲೇ ನೀರು ಕುಡಿದರೆ ಆಗ ದಿನವಿಡಿ ತುಂಬಾ ಶಕ್ತಿ, ಕ್ರಿಯಾತ್ಮಕ ಹಾಗೂ ಚಟುವಟಿಕೆಯಿಂದ ಇರಬಹುದು. ವಾತಾವರಣಕ್ಕೆ ಅನುಗುಣವಾಗಿ ದೇಹಕ್ಕೆ ಬೇಕಾದಷ್ಟು ನೀರು ಕುಡಿಯಿರಿ ಆರೋಗ್ಯ ವಾಗಿರಿ