-->

ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಶಿವರಾಮ್ ಇನ್ನಿಲ್ಲ

ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನಟ ಶಿವರಾಮ್ ಇನ್ನಿಲ್ಲ


ಬೆಂಗಳೂರು: ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ನಟ, ಮಾಜಿ ಐಎಎಸ್‌ ಅಧಿಕಾರಿ ಕೆ.ಶಿವರಾಮ್(71) ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಕಳೆದ 12 ದಿನಗಳಿಂದ ಸಂಪಂಗಿರಾಮ ನಗರದ ಹೆಚ್‌ಜಿಎಸ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಮ್‌ ಇಂದು ಕೊನೆ ಉಸಿರೆಳೆದಿದ್ದಾರೆ. 


ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ ಎಂದು ನಿನ್ನೆಯಿಂದ ಸುದ್ದಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಅವರ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ.

1953ರ ಏಪ್ರಿಲ್ 6ರಂದು ಶಿವರಾಮ್‌ ಮೂಲತಃ ರಾಮನಗರ ಜಿಲ್ಲೆ ಉರುಗಹಳ್ಳಿಯಲ್ಲಿ ಹುಟ್ಟಿದ್ದರು. ಶಿವರಾಮ್‌ ಅವರ ಮೂಲ ಹೆಸರು ಶಿವರಾಮು ಕೆಂಪಯ್ಯ. ನಾಗತಿಹಳ್ಳಿ ಚಂದ್ರಶೇಖರ್ ನಿದೇಶನದ 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದಲ್ಲಿ ನಟಿಸಿ ಕೆ.ಶಿವರಾಮು ಅವರು ಕರ್ನಾಟಕದ ಮನೆ ಮಾತಾಗಿದ್ದರು. ಯಾರಿಗೆ ಬೇಡ ದುಡ್ಡು, ಟೈಗರ್ ಮುಂತಾದ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಭಕ್ತೇ ಕದಮ್, ಬೋಲೆ ಬೋಲೆ ಲಡಕಿ ಮುಂತಾದ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದರು. 

Ads on article

Advertise in articles 1

advertising articles 2

Advertise under the article