-->

ನೂರು ಕೋಟಿ ಆಫರ್ ಕೊಟ್ಟರೂ ಈ ಸಿನಿಮಾದಲ್ಲಿ ನಟಿಸಲು ಒಪ್ಪೋಲ್ಲ ಎಂದ ಲೇಡಿ ಸ್ಟಾರ್ ನಯನತಾರಾ

ನೂರು ಕೋಟಿ ಆಫರ್ ಕೊಟ್ಟರೂ ಈ ಸಿನಿಮಾದಲ್ಲಿ ನಟಿಸಲು ಒಪ್ಪೋಲ್ಲ ಎಂದ ಲೇಡಿ ಸ್ಟಾರ್ ನಯನತಾರಾ


ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಪ್ರಖ್ಯಾತರಾಗಿರುವ ನಯನತಾರಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಸಿನಿಮಾ ಅಭಿನಯಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರ ಸಾಲಿನಲ್ಲಿ ನಯನತಾರಾ ಅಗ್ರ ಸ್ಥಾನದಲ್ಲಿದ್ದಾರೆ. ಪ್ರತೀ ಸಿನಿಮಾಕ್ಕೆ ಅದರ ಬಜೆಟ್ ಆಧರಿಸಿ 5 ರಿಂದ 10, 15 ಕೋಟಿ ರೂ. ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಆದರೆ ದುಪ್ಪಟ್ಟು ಸಂಭಾವನೆ ಕೊಡುತ್ತೇನೆಂದರೂ ಆ ಒಂದು ಸಿನಿಮಾದಲ್ಲಿ ಅಭಿನಯಿಸಲು ಒಲ್ಲೆ ಅಂದಿದ್ದರಂತೆ. 100 ಕೋಟಿ ರೂ. ಕೊಟ್ಟರೂ ನಟಿಸುವುದಿಲ್ಲ ಎಂದು ನಯನತಾರಾ ಹೇಳಿದ್ದಾರೆ ಅನ್ನೋ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ತಮಿಳುನಾಡಿನ ಖ್ಯಾತ ಉದ್ಯಮಿ 'ಲೆಜೆಂಡ್ ಸರವಣನ್' (ಅರುಳ್‌ ಸರವಣನ್) ಈ ನಡುವೆ ಹೀರೋ ಆಗಿ ಹೊರಹೊಮ್ಮಿರುವುದು ಗೊತ್ತೇ ಇದೆ. ಅವರೇ 'ದಿ ಲೆಜೆಂಡ್' ಎಂಬ ಸಿನಿಮಾ ನಿರ್ಮಿಸಿ, ನಾಯಕನಾಗಿ ನಟಿಸಿದ್ದರು. ಆದರೆ 2022ರಲ್ಲಿ ತೆರೆಗಪ್ಪಳಿಸಿದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಿನ್ನೆಡೆ ಕಂಡಿತ್ತು. ಸರವಣನ್ ರೊಂದಿಗೆ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ತೆರೆ ಹಂಚಿಕೊಂಡಿದ್ದರು. ಆದರೆ ಊರ್ವಶಿ ರೌಟೇಲಾಗೂ ಮುನ್ನ ನಯನತಾರಾ ಅವರಿಗೆ ಈ ಆಫರ್ ಸಿಕ್ಕಿತ್ತು. ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಅವರಿಂದ ನಟನೆ ಮಾಡಿಸಲು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ಮಾಹಿತಿ ಇದೆ.

ಆದರೆ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಲೇಡಿ ಸೂಪರ್ ಸ್ಟಾ‌ರ್ ನಯನತಾರಾ ತಿಳಿಸಿದ್ದರು. ದುಪ್ಪಟ್ಟು ಸಂಭಾವನೆ ನೀಡುವುದಾಗಿಯೂ ಹೇಳಿದ್ದರು. ಆದರೆ ನಯನತಾರಾ ಈ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಡಲಿಲ್ಲ. 100 ಕೋಟಿ ರೂ. ಕೊಟ್ಟರೂ ನಟಿಸುವುದಿಲ್ಲ ಎಂದು ನಯನತಾರಾ ತಿಳಿಸಿದ್ದರೆಂದು ಕೆಲ ವರದಿಗಳಾಗಿವೆ. ಬಳಿಕ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಈ ಚಿತ್ರದ ಭಾಗವಾದರು. ಇದಕ್ಕಾಗಿ ಚೆಲುವೆಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ ಎಂಬ ಬಗ್ಗೆ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

Ads on article

Advertise in articles 1

advertising articles 2

Advertise under the article