-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸಮುದ್ರದ ಆಳದ ದ್ವಾರಕಾಧೀಶ ದೇವಾಲಯದ ದರ್ಶನ ಪಡೆದ ಮೋದಿ!

ಸಮುದ್ರದ ಆಳದ ದ್ವಾರಕಾಧೀಶ ದೇವಾಲಯದ ದರ್ಶನ ಪಡೆದ ಮೋದಿ!



ದ್ವಾರಕಾ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ದ್ವಾರಕಾದಲ್ಲಿ ಅಳವಾದ ನೀರಿನಲ್ಲಿ ಮುಳುಗಿ ದ್ವಾರಕಾಧೀಶ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿದರು. "ಆಧ್ಯಾತ್ಮಕ ಹಿರಿಮೆಯ ಪುರಾತನ ಯುಗಕ್ಕೆ ಸಂಪರ್ಕ ಹೊಂದಿದ ಅನುಭವವಾಯಿತು" ಎಂದು ಪ್ರಧಾನಿ ಮೋದಿ ಅವರು ಇದನ್ನು 'ದೈವಿಕ ಅನುಭವ' ಎಂಬುದಾಗಿ ಬಣ್ಣಿಸಿದ್ದಾರೆ.

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭೂತಿ. ದೈವಿಕ ಔನ್ನತ್ಯ ಹಾಗೂ ಕಾಲಮಿತಿಯಿಲ್ಲದ ಭಕ್ತಿಯ ಪುರಾತನ ಯುಗಕ್ಕೆ ನಂಟು ಬೆಸೆದುಕೊಂಡಂತೆ ಅನಿಸಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಹರಸಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹೇಳಿದ್ದಾರೆ.

ಇಂದು ನಾನು ಅನುಭವಿಸಿದ ಆ ಕ್ಷಣಗಳು ನನ್ನ ಜೀವನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿವೆ. ನಾನು ಸಮುದ್ರದ ಆಳಕ್ಕೆ ತೆರಳಿದ್ದೆ ಮತ್ತು ಪುರಾತನ ದ್ವಾರಕಾ ನಗರದ ದರ್ಶನ ಮಾಡಿದೆ. ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಪುರತತ್ವ ಶಾಸ್ತ್ರಜ್ಞರು ಸಾಕಷ್ಟು ಬರೆದಿದ್ದಾರೆ. ನಮ್ಮ ಗ್ರಂಥಗಳಲ್ಲಿ ಕೂಡ ಸುಂದರ ದ್ವಾರಗಳು ಹಾಗೂ ಜಗತ್ತಿನ ತುದಿಯ ಎತ್ತರದಷ್ಟು ಉದ್ದನೆಯ ಕಟ್ಟಡಗಳಿದ್ದ ನಗರ ಎಂಬುದಾಗಿ ದ್ವಾರಕಾವನ್ನು ವರ್ಣಿಸಲಾಗಿದೆ. ಶ್ರೀ ಕೃಷ್ಣ ಸ್ವತಃ ಈ ನಗರವನ್ನು ನಿರ್ಮಿಸಿದ್ದ" ಎಂದು ದ್ವಾರಕಾ ದರ್ಶನದ ಬಳಿಕ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಿಳಿಸಿದರು.

ನಾನು ಸಾಗರದ ಆಳಕ್ಕೆ ಇಳಿದಾಗ, ದೈವಿಕತೆಯ ಅನುಭವ ಪಡೆದೆ... ದ್ವಾರಕಾಧೀಶನ ಎದುರು ತಲೆಬಾಗಿದೆ. ನನ್ನೊಂದಿಗೆ ನವಿಲುಗರಿಯನ್ನು ಕೊಂಡೊಯ್ದು, ಅದನ್ನು ಶ್ರೀ ಕೃಷ್ಣನ ಪಾದ ಕಮಲಗಳ ಬಳಿ ಇರಿಸಿದೆ. ಅಲ್ಲಿಗೆ ಹೋಗುವ ಮತ್ತು ಅಳಿದುಳಿದ ಪುರಾತನ ದ್ವಾರಕಾ ನಗರವನ್ನು ಸ್ಪರ್ಶಿಸುವ ಕುತೂಹಲ ಸದಾ ನನ್ನಲ್ಲಿ ಇತ್ತು. ಇಂದು ನಾನು ಸಂಪೂರ್ಣ ಭಾವುಕನಾಗಿದ್ದೇನೆ. ದಶಕಗಳಷ್ಟು ಹಳೆಯದಾದ ಕನಸು ಇಂದು ಈಡೇರಿದೆ" ಎಂದು ಹೇಳಿದರು.

.ಬೇಯ್ ದ್ವಾರಕಾ ದ್ವೀಪದ ಸಮೀಪದ ಕರಾವಳಿಯಲ್ಲಿ ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್ ನಡೆಸಿದರು. ಪುರಾತತ್ವ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಪುರಾತನ ದ್ವಾರಕಾ ನಗರದ ಅವಶೇಷಗಳನ್ನು ಪತ್ತೆ ಮಾಡಿದ್ದು, ಜನರು ಅದನ್ನು ವೀಕ್ಷಿಸಲು ಅವಕಾಶವಿದೆ.

ದ್ವಾರಕಾ ನಗರದ ಸುದರ್ಶನ ಸೇತುವನ್ನು ಉದ್ಘಾಟಿಸಿದ  ಪ್ರಧಾನಿ: 
ದ್ವಾರಕಾದಲ್ಲಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೂಡ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ದೇಶದ ಅತಿ ಉದ್ದನೆಯ ಕೇಬಲ್ ಸೇತುವೆ ಎನಿಸಿರುವ 'ಸುದರ್ಶನ ಸೇತು'ವನ್ನು ಉದ್ಘಾಟಿಸಿದರು. ಬೇಯ್ ದ್ವಾರಕಾ ದ್ವೀಪ ಹಾಗೂ ದೇವಭೂಮಿ ದ್ವಾರಕಾ ನಗರದಲ್ಲಿನ ಓಖಾ ಮುಖ್ಯ ನಗರವನ್ನು ಸಂಪರ್ಕಿಸಲು ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಿರುವ 2.32 ಕಿಮೀ ಉದ್ದದ ಸೇತುವೆ ಇದಾಗಿದೆ. 979 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ