ಇಂಗ್ಲೀಷ್ ಪರೀಕ್ಷೆ ಬರೆದು ನಾಲ್ವರು ವಿದ್ಯಾರ್ಥಿಗಳು ನಾಪತ್ತೆ
Tuesday, February 27, 2024
ಮಂಗಳೂರು: ಇಂಗ್ಲೀಷ್ ಪರೀಕ್ಷೆ ಬರೆದ ಬಳಿಕ ನಾ;ಲ್ವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ಯಶ್ವಿತ್ ಚಂದ್ರಕಾಂತ್, ನಿರೂಪ್, ಅನ್ವಿತ್ ಮತ್ತು ರಾಘವೇಂದ್ರ ನಾಪತ್ತೆಯಾದವರು.
ಇವರು ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ 10 ನೆ ತರಗತಿ ಕಲಿಯುತ್ತಿದ್ದರು. ಇವರಿಗೆ ಇಂದು ಇಂಗ್ಲೀಷ್ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ ಬಳಿಕ ಇವರು ನಾಲ್ವರು ಒಟ್ಟಾಗಿ ಸುಮಾರು 1:30 ರ ಸುಮಾರಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ