-->
IAS ಪರೀಕ್ಷೆ ಯನ್ನು ಕನ್ನಡದಲ್ಲೇ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗನಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

IAS ಪರೀಕ್ಷೆ ಯನ್ನು ಕನ್ನಡದಲ್ಲೇ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗನಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

ಖ್ಯಾತ ನಟ , ಮಾಜಿ ಐಎಎಸ್ ಅಧಿಕಾರಿ ಹಾಗೂ ರಾಜಕಾರಣಿ ಕೆ. ಶಿವರಾಂ ಅವರಿಗೆ  ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿದ್ದು ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಎಚ್ ಸಿ ಜಿ ಆಸ್ಪತ್ರೆ ಯಲ್ಲಿ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶಿವರಾಂ ಅವರಿಗೆ ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಅನ್ನೋ ಮಾಹಿತಿ  ಇದೆ. 

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಶಿವರಾಂ ಅಳಿಯ ಮಾಹಿತಿ ನೀಡಿದ್ದಾರೆ. 
ನಟ ಹಾಗೂ ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಂಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು
ಖ್ಯಾತ ನಟ , ಮಾಜಿ ಐಎಎಸ್ ಅಧಿಕಾರಿ ಹಾಗೂ ರಾಜಕಾರಣಿ ಕೆ. ಶಿವರಾಂ (K Shivaram) ಅವರಿಗೆ  ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

 ಶಿವರಾಂ ಅವರ ಸ್ಥಿತಿ ಚಿಂತಾಜನಕವಾಗಿದ್ದು ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಗರದ ಎಚ್ ಸಿ ಜಿ ಆಸ್ಪತ್ರೆ ಯಲ್ಲಿ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶಿವರಾಂ ಅವರಿಗೆ ಕಾರ್ಡಿಯಕ್ ಅರೆಸ್ಟ್ ಹಾಗೂ ಬ್ರೈನ್ ಡೆಡ್ ಆಗಿದೆ ಅನ್ನೋ ಮಾಹಿತಿ  ಇದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಶಿವರಾಂ ಅಳಿಯ ಮಾಹಿತಿ ನೀಡಿದ್ದಾರೆ. 

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವರಾಂ : 
ಬಾನಲ್ಲೆ ಮಧುಚಂದ್ರಕ್ಕೆ  ಹಾಗೂ ವಸಂತ ಕಾವ್ಯ ಚಿತ್ರದಲ್ಲಿ ಶಿವರಾಂ ನಟಿಸಿದ್ದು. ರಾಜಕೀಯದಲ್ಲೂ ಸಕ್ರಿಯರಾಗಿದ್ರು. ನಟ ಶಿವರಾಂ ಅವರಿಗೆ 71 ವರ್ಷ ವಯಸ್ಸಾಗಿದ್ದು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು ಎನ್ನಲಾಗಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಶಿವರಾಂ ಅವರಿಗೆ ಇದೀಗ ಹೃದಯಘಾತ ಸಂಭವಿಸಿದೆ. ವಿಷಯ ತಿಳಿದ ಅಭಿಮಾನಿಗಳು ಶಿವರಾಂ ಆರೋಗ್ಯ ಸುಧಾರಿಸಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕನ್ನಡದಲ್ಲಿ ಪರಿಕ್ಷೆ ಬರೆದು ಪಾಸ್ ಅದ ಮೊದಲಾ ಕನ್ನಡಿಗ : 
ಬಾ ನಲ್ಲೆ ಮಧುಚಂದ್ರಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆ ಶಿವರಾಂ ಜನಪ್ರಿಯರಾಗಿದ್ರು.  ವೃತ್ತಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದರು ಸಿನಿಮಾ ಮಾಡುವ ಆಸೆ ಹೆಚ್ಚಿತ್ತು.  ನಂತರ ವಸಂತ ಕಾವ್ಯ ,ಸಾಂಗ್ಲಿಯಾನ 3 ಖಳ ನಾಯಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಶಿವರಾಂ ಅವರು ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗರಾಗಿದ್ದಾರೆ ಸಿನಿಮಾಗಳ ಮೂಲಕ ಜನರ ಮನಗೆದ್ದಿದ್ದಾರೆ.  ವಾಣಿ ಅವರನ್ನು ಮದುವೆಯಾದ ಶಿವರಾಂ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.
2013 ರಲ್ಲಿ ನಿವೃತ್ತಿಯ ನಂತರ ಕೆ ಶಿವರಾಂ ಅವರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆ ಬಿಜೆಪಿ ಪಕ್ಷ ಸೇರಿಕೊಂಡ್ರು. ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಕ್ಕೆ ಕೆ ಶಿವರಾಂ ಸದಾ ಮುಂದಿದ್ದರು.

Ads on article

Advertise in articles 1

advertising articles 2

Advertise under the article