-->

ಬೇಸಿಗೆ ಕಾಲದಲ್ಲಿ ಆರೋಗ್ಯದ  ಕಾಳಜಿ ಹೇಗೆ

ಬೇಸಿಗೆ ಕಾಲದಲ್ಲಿ ಆರೋಗ್ಯದ ಕಾಳಜಿ ಹೇಗೆಋತುಗಳು ಬದಲಾದಂತೆ ದೇಹದಲ್ಲಿ ಬದಲಾವಣೆ ಆಗುವಂತೆ  ಬದಲಾದ ಋತುಮಾನಕ್ಕೆ ಅನುಸಾರವಾಗಿ ಭಿನ್ನ ಹಣ್ಣುಗಳು, ಮೂಲಿಕೆಗಳು ಮತ್ತು ಸಾಂಬಾರ ಪದಾರ್ಥಗಳು ಲಭಿಸುತ್ತವೆ. ಆಯಾ ಋತು ಮಾನಕ್ಕೆ ತಕ್ಕಂತೆಯೇ ಇವನ್ನು ನಿಸರ್ಗವೇ ರೂಪಿಸಿರುವ ಕಾರಣ ಇವು ದೇಹವನ್ನು ತಂಪಾಗಿಸಲು ನೆರವಾಗುತ್ತವೆ. ಹಲವು ಪಾನೀಯಗಳು ರುಚಿಕರವೂ ದೇಹವನ್ನು ತಂಪಾಗಿಸಿರಿಸಲೂಅಗತ್ಯವಾಗಿದೆ.

• ಬೇಸಿಗೆ ಹತ್ತಿರಾಗುತ್ತಿದ್ದಂತೆ ಬೇಸಿಗೆಯಲ್ಲಿ ತಂಪುಪಾನೀಯ ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಹೆಚ್ಚಿನವರು ಕುರುಕು ತಿಂಡಿಗಳು ಮತ್ತು ಎಣ್ಣೆಯುಕ್ತ ಆಹಾರಗಳ ಜೊತೆ ಸಿದ್ಧ ರೂಪದಲ್ಲಿ ಸಿಗುವ  ಪಾನೀಯಗಳ ಮೊರೆ ಹೋಗುತ್ತಾರೆ ಇವುಗಳಲ್ಲಿರುವ ಅತ್ಯಧಿಕ ಪ್ರಮಾಣದ ಸಕ್ಕರೆ ಮತ್ತು ಕ್ಯಾಲೋರಿ ಗಳು ದೇಹಕ್ಕೆ ಅನಗತ್ಯ ಹೊರಯನ್ನು ಹೇರುತ್ತವೆ.

• ತಂಪು ಎಂದು ತಿನ್ನುವ ಅತಿ ಸಿಹಿಯಾದ ಐಸ್ ಕ್ರೀಂ, ಗಡ್ ಬಡ್, ಫಾಲೂದಾ ಇತ್ಯಾದಿಗಳೂ ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಯನ್ನು ಹೊಂದಿದ್ದು ಬೇಸಿಗೆಯ ಬೇಗೆಯನ್ನು ತಣಿಸಿದರೂ ದೇಹದಲ್ಲಿ ಕೊಬ್ಬನ್ನು ತುಂಬಿಸಿ ತೂಕವನ್ನು ಹೆಚ್ಚಿಸುತ್ತದೆ.

• ಬುರುಗು ಪಾನೀಯಗಳಂತೂ ಮೂತ್ರಪಿಂಡದ ತೊಂದರೆ ಮತ್ತು ಹೃದ್ರೋಗ ಎದುರಾಗಲೂ ನೇರ ಕಾರಣವಾಗಿರುವುದು ಅಧ್ಯನಗಳಿಂದ ದೃಢಪಟ್ಟಿದೆ. ಹಾಗಾಗಿ ಆಯುರ್ವೇದ ಸೂಚಿಸಿ ರುವ ತಂಪು ಪಾನೀಯಗಳನ್ನು ಸೇವಿಸುವುದು ಒಳ್ಳೆಯದು .

ಆರೋಗ್ಯಕಾರ ಪಾನಿಯಗಳು: 
ಸತ್ತು ಶಕ್ತಿ ಪಾನೀಯ : 
• ಈ ಮೂಲಿಕೆಯಲ್ಲಿ ದೇಹವನ್ನು ತಂಪುಗೊಳಿಸುವ ಗುಣವಿದೆ ಹಾಗೂ ಅತಿ ಸುಲಭವಾಗಿ ಜೀರ್ಣಗೊಳ್ಳುವ ಪ್ರೋಟೀನುಗಳಿವೆ. ವಿಶೇಷವಾಗಿ ನಿತ್ಯವೂ ವ್ಯಾಯಾಮ ಮಾಡುವ ವ್ಯಕ್ತಿಗಳಿಗೆ ಈ ಶರ್ಬತ್ ಅತ್ಯುತ್ತಮ ಆಯ್ಕೆಯಾಗಿದೆ.
• ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ಚಮಚ ಸತ್ತು ಪುಡಿ ಯನ್ನು ಬೆರೆಸಿ. ಇದಕ್ಕೆ ಚಿಟಿಕೆಯಷ್ಟು ಹುರಿದ ಜೀರಿಗೆ ಮತ್ತು ಚಿಟಿಕೆಯಷ್ಟು ಹಿಮಾಯದ ಕೆಂಪು ಉಪ್ಪನ್ನು ಬೆರೆಸಿ. ರುಚಿಗಾಗಿ ಕೊಂಚವೇ ಬೆಲ್ಲವನ್ನು ಹಾಕಿ ಕಲಕಿ. ರುಚಿಕರ ಸತ್ತು ಶರ್ಬತ್ ತಯಾರಾಗಿದೆ

ಪುದೀನಾ ಶರ್ಬತ್ : 
• 2-3 ಲೋಟದಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ಮುಷ್ಟಿಯಷ್ಟು ಪುದಿನಾ ಎಲೆಗಳನ್ನು ಚೆನ್ನಾಗಿ ತೊಳೆದು ಹಾಕಿ. ಒಂಚು ಚಿಕ್ಕ ತುಂಡು ಕಲ್ಲು ಸಕ್ಕರೆಯನ್ನು (ನಿಮ್ಮ ರುಚಿಗೆ ಅನುಸಾರವಾಗಿ) ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ.
• ಬಳಿಕ ಅರ್ಧ ಲಿಂಬೆಯ ರಸ ಮತ್ತು ರುಚಿಗೆ ಅನುಸಾರವಾಗಿ ಕೊಂಚ ಕಲ್ಲುಪ್ಪನ್ನು ಸೇರಿಸಿ. ಈ ಪಾನೀಯವನ್ನು ಸೋಸಿ ಕುಡಿಯಿರಿ. ಇದರ ರುಚಿಯನ್ನು ನೋಡಿದ ಬಳಿಕ ಮತ್ತೆಂದೂ ಅಪಾಯಕಾರಿ ಬುರುಗು ಪಾನೀಯಗಳನ್ನು ಬಯಸಲಾರಿರಿ.ಗುಲ್ಕಂದ್ ಶರ್ಬತ್
ಒಂದು ಲೋಟ ಹಾಲಿಗೆ ಒಂದು ದೊಡ್ಡ ಚಮಚ ಗುಲ್ಬಂದ್ (ಗುಲಾಬಿ ಹೂವುಗಳ ದಳಗಳಿಂದ ಮಾಡಿದ ಸಿಹಿವಸ್ತು, ಪಾನ್ ಬೀಡಾಗಳಲ್ಲಿ ಬಳಸಲಾಗುತ್ತದೆ) ಅನ್ನು ಹಾಕಿ ಹ್ಯಾಂಡ್ ಬ್ಲೆಂಡರ್‌ನಲ್ಲಿ ಗೊಟಾಯಿಸಿ. ಅಷ್ಟೇ, ಅತಿ ರುಚಿಕರವಾದ ತಂಪು ಪಾನೀಯ ಸಿದ್ಧವಾಗಿದೆ.

ಪಾನ್ ಶರ್ಬತ್ : 
'ಅಗತ್ಯವಿರುವ ಸಾಮಾಗ್ರಿಗಳು: 4 ವೀಳ್ಯದ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ. ಈ ಎಲೆಗಳು ಎಳೆಯದ್ದಾಗಿ
ಇದ್ದಷ್ಟೂ ಉತ್ತಮ. ಇದಕ್ಕೆ ನಾಲ್ಕು ಚಿಕ್ಕ ಚಮಚ ಗುಲ್ಬಂದ್, ಒಂದು ಚಿಕ್ಕ ಚಮಚ ದೊಡ್ಡ ಜೀರಿಗೆ ಅಥವಾ ಸೌಂಫ್, ಒಂದು ಚಿಕ್ಕ ಚಮಚ ತೆಂಗಿನ ತುರಿ, ಒಂದು ದೊಡ್ಡ ಚಮಚ ಕಲ್ಲುಸಕ್ಕರೆ (ಐಚ್ಛಿಕ), ಕಾಲು ಕಪ್ ನೀರು.
ಮೊದಲಿಗೆ ಚಿಕ್ಕದಾಗಿ ಕತ್ತರಿಸಿರುವ ವೀಳ್ಯದ ಎಲೆಗಳನ್ನು ಮಿಕ್ಸಿಯಲ್ಲಿ ಹಾಕಿ ನೀರಿಲ್ಲದೇ ಗೊಟಾಯಿಸಿ. ಬಳಿಕ ನೀರಿನ ಹೊರತಾಗಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಹಾಕಿ ಕೆಲವು ಸೆಕೆಂಡುಗಳವರೆಗೆ ಗೊಟಾಯಿಸಿ.
• ಬಳಿಕ ನೀರನ್ನು ಹಾಕಿ ಗೊಟಾಯಿಸಿ. ನಿಮಗೆ ಕುಡಿಯಲು ಎಷ್ಟು ಸ್ನಿಗ್ಧವಿರಬೇಕು ಎಂದು ಅನ್ನಿಸುತ್ತದೆಯೋ ಆ ಪ್ರಕಾರ ನೀರನ್ನು ಹೆಚ್ಚಿಸ ಬಹುದು. ಅತ್ಯಂತ ಭಿನ್ನ ರುಚಿ ಇರುವ ಈ ಪಾನೀಯ ಬೇಸಿಗೆಯ ಬೇಗೆಯಲ್ಲಿ ಕುಡಿಯಲು ಅದ್ಭುತವಾಗಿದೆ

ಕೋಕಂ ಶರ್ಬತ್ : 
• ಎರಡು ತಾಜಾ ಕೋಕಂ ಹಣ್ಣುಗಳನ್ನು ಕತ್ತರಿಸಿ ಬೀಜಗಳನ್ನು ನಿವಾರಿಸಿ ಮತ್ತು ತಿರುಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಒಂದು ತುಂಡು ಕಲ್ಲು ಸಕ್ಕರೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಪೂರ್ಣವಾಗಿ ಕರಗುವಂತೆ ಮಾಡಿ.
• ಈ ನೀರಿಗೆ ಅರೆದ ಕೋಕಂ ಲೇಪವನ್ನು ಬೆರೆಸಿ. ರುಚಿಗಾಗಿ ಕೊಂಚ ಜೀರಿಗೆ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ. ಈ ದ್ರವ ವನ್ನು ಬಾಟಲಿಯಲ್ಲಿ ಸಂಗ್ರಹಿಸಿ. ಕುಡಿಯಲು ಅಗತ್ಯವೆನಿಸಿ ದಾಗ ಒಂದು ಲೋಟ ಮಡಕೆಯ ತಣ್ಣನೆಯ ನೀರಿಗೆ 2-3 ದೊಡ್ಡ ಚಮಚ ದಷ್ಟು ಈ ದ್ರವವನ್ನು ಮಿಶ್ರಣ ಮಾಡಿ ಕುಡಿಯಲು 

ಕಬ್ಬಿನ ಜ್ಯೂಸ್  : 
ತಾಜಾ ಕೆಂಪು ಕಬ್ಬುಗಳಿಂದ ಹಿಂಡಿ ತೆಗೆದ ರಸವನ್ನು ಕೊಂಚ ಹಸಿ ಶುಂಠಿಯೊಂದಿಗೆ ಬೆರೆಸಿ ಕುಡಿಯಿರಿ. ಬಿಸಿಲ ಬೇಗೆಯಿಂದ ಎದುರಾದ ಬಳಲಿಕೆಯ ನಿವಾರಣೆಗೆ ಈ ಪಾನೀಯ ಅತ್ಯುತ್ತಮ ಪರಿಹಾರವಾಗಿದೆ. (ಸೂಚನೆ ಮಧುಮೇಹಿಗಳು ಈ ಪಾನೀಯವನ್ನು ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯಿರಿ

ಎಳನೀರು : 
ತಾಜಾ ಎಳನೀರನ್ನು ಬೇಸಿಗೆಯಲ್ಲಿ ಬೆಳಗ್ಗಿನ ಯಾವುದೇ ಹೊತ್ತು ಕುಡಿ ಯಬಹುದು. ಆದರೆ ಮಧ್ಯಾಹ್ನದ ಊಟವಾದ ಬಳಿಕ ಎರಡು ಘಂಟೆಯ ಬಳಿಕವೇ (ಸುಮಾರು ಸಂಜೆ ನಾಲ್ಕು ಘಂಟೆಗೆ) ಕುಡಿಯಬೇಕು.

Ads on article

Advertise in articles 1

advertising articles 2

Advertise under the article