ಬಂಟ್ವಾಳ: ಆರು ತಿಂಗಳ ಚೊಚ್ಚಲ ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರು - ಸಾವು

ಬಂಟ್ವಾಳ: 6 ತಿಂಗಳ ಚೊಚ್ಚಲ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬುಧವಾರ ರಂದು ನಡೆದಿದೆ.

ತೆಂಕಕಜೆಕಾರು ನಿವಾಸಿ ಪತ್ನಿ ಸುಜಾತಾ (40) ಮೃತಪಟ್ಟವರು. 6 ತಿಂಗಳ ಗರ್ಭಿಣಿಯಾಗಿದ್ದ ಸುಜಾತಾ ಗರ್ಭಸ್ಥ ಶಿಶುವಿಗೆ ಹೃದಯದ ಸಮಸ್ಯೆ ಹಿನ್ನಲೆಯಲ್ಲಿ ಫೆ.12ರಂದು ಮಂಗಳೂರು ಲೇಡಿಗೋಶನ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಫೆ.14ರ ಸಂಜೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಸುಜಾತಾ ಹಾಗೂ ವಸಂತ ದಂಪತಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಾಗಿರಲಿಲ್ಲ. ಇದೀಗ ಅವರು ಚೊಚ್ಚಲ ಗರ್ಭಿಣಿಯಾಗಿದ್ದರು. ಆದರೆ ಚೊಚ್ಚಲ ಹೆರಿಗೆಗಿಂತ ಮೊದಲೇ ಅವರು ಮೃತಪಟ್ಟಿದ್ದಾರೆ.