ಪುತ್ತೂರು: ಹೃದಯಾಘಾತಕ್ಕೊಳಗಾಗಿ ಕಾಲೇಜು ವಿದ್ಯಾರ್ಥಿನಿ ಮಲಗಿದ್ದಲ್ಲಿಯೇ ಮೃತ್ಯು


ಪುತ್ತೂರು: ಹೃದಯಾಘಾತಕ್ಕೊಳಗಾದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ನಡೆದಿದೆ.

ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿಯ ನಿವಾಸಿ ಹಫೀಝಾ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ. ಹಫೀಝಾ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಆಕೆ ಪರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿವರೆಗೆ ಓದುತ್ತಿದ್ದು, ಬಳಿಕ ಮಲಗಿದ್ದಾಳೆ.

ಆದರೆ ಗುರುವಾರ ಬೆಳಗ್ಗೆ ಹಫೀಝಾ ಎದ್ದೇಳಲೇ ಇಲ್ಲ. ಆದ್ದರಿಂದ ಮನೆಯವರು ಎಬ್ಬಿಸಲು ಹೋದಾಗ ಆಕೆ ಮೃತಪಟ್ಟಿರುವುದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ದಿಢೀ‌ರ್ ಸಾವು ಕುಟುಂಬಸ್ಥರನ್ನು ದುಃಖಕ್ಕೆ ದೂಡಿದೆ.