ಮಂಗಳೂರು: ಭಾರತದ ಗಡಿ ಮೀರಿ ಪ್ರವೇಶ ಮಾಡಿತೇ ಚೀನಾ ಬೋಟ್?
Thursday, February 22, 2024
ಮಂಗಳೂರು: ಚೀನಾದ ಬೋಟೊಂದು ತನ್ನ ಗಡಿಯನ್ನು ಮೀರಿ ಭಾರತದ ಗಡಿಯನ್ನು ಪ್ರವೇಶಿಸಿ ಅವೈಜ್ಞಾನಿಕ ಮೀನುಗಾರಿಕೆ ನಡೆಸಿದೆ ಎಂದು ಕರಾವಳಿಯ ಮೀನುಗಾರರು ಆರೋಪಿಸಿದ್ದಾರೆ. ಚೀನಾದ ಬೋಟ್ ಮೀನುಗಾರಿಕೆ ನಡೆಸುತ್ತಿದ್ದ ವೀಡಿಯೋವನ್ನು ರಾಜ್ಯದ ಕರಾವಳಿಯ ಮೀನುಗಾರರು ಸೆರೆ ಹಿಡಿದಿದ್ದಾರೆ.
ಚೀನಾದ ಬೋಟು ಸಮುದ್ರದ ಗಡಿ ಮೀರಿ ಭಾರತದ ಸಮುದ್ರ ಗಡಿಪ್ರವೇಶ ಮಾಡಿ ಅವೈಜ್ಞಾನಿಕ ಲೈಟ್ ಫಿಶಿಂಗ್ ಮಾಡಿದೆ ಎಂದು ಕರಾವಳಿಯ ಮೀನುಗಾರರು ಆರೋಪಿಸಿದ್ದಾರೆ. ಈ ಬೋಟು ಭಾರತಕ್ಕೆ ಸೇರಿದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಚೀನಾದ ಬೋಟ್ ದಾರಿ ತಪ್ಪಿ ಬಂದಿದೆಯೇ ಅಥವಾ ಬೇಕಂದೇ ಬಂದಿದೆಯೇ ಎಂದು ತನಿಖೆ ಮಾಡುವಂತೆ ಕರಾವಳಿಯ ಮೀನುಗಾರರು ಆಗ್ರಹಿಸಿದ್ದಾರೆ. ಕೋಸ್ಟ್ ಗಾರ್ಡ್ ಸಮಗ್ರ ತನಿಖೆ ಮಾಡುವಂತೆ ಮನವಿ ಮಾಡುವಂತೆಯೂ ಮನವಿ ಮಾಡಿದ್ದಾರೆ.