-->

ಬಂಟ್ವಾಳ: ಕರ್ನಾಟಕ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಕೋಟ್ಯಂತರ ಮೌಲ್ಯದ ನಗದು, ಚಿನ್ನಾಭರಣ ದರೋಡೆ

ಬಂಟ್ವಾಳ: ಕರ್ನಾಟಕ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಕೋಟ್ಯಂತರ ಮೌಲ್ಯದ ನಗದು, ಚಿನ್ನಾಭರಣ ದರೋಡೆ


ಬಂಟ್ವಾಳ: ಇಲ್ಲಿನ ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿನ ಕರ್ನಾಟಕ ಬ್ಯಾಂಕ್ ಶಾಖೆಗೆ ನುಗ್ಗಿದ ದರೋಡೆಕೋರರು ಲಾಕರ್ ಒಡೆದು ಕೋಟ್ಯಂತರ ರೂ. ನಗ - ನಗದು ದರೋಡೆಗೈದ ಘಟನೆ ನಡೆದಿದೆ.

ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಈ ಕರ್ನಾಟಕ ಬ್ಯಾಂಕ್ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 20 ವರುಷ ಹಳೆಯದಾದ ಈ ಕಟ್ಟಡದ ಸುತ್ತಲೂ ಕಾಡು-ಪೊದೆಗಳು ಆವರಿಸಿದೆ. ಈ ಪೊದೆಯ ಭಾಗದಿಂದಲೇ ಕಳ್ಳರು ಒಳನುಗ್ಗಿದ್ದಾರೆ. ಗ್ಯಾಸ್ ಕಟ್ಟರ್ ಅನ್ನು ಬಳಸಿ ಬ್ಯಾಂಕ್ ನ ಹಿಂಭಾಗದ ಕಿಟಕಿ ಸರಳನ್ನು  ಮುರಿದು ಒಳನುಗ್ಗಿದ ಕಳ್ಳರು ಬ್ಯಾಂಕ್ ಲಾಕರ್ ಮುರಿದು ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ದರೋಡೆಗೈದಿದ್ದಾರೆ.


ಇಂದು ಬೆಳಗ್ಗೆ ಸಿಬ್ಬಂದಿ ಇಂದು ಬೆಳಗ್ಗೆ 9.30ಗೆ ಬ್ಯಾಂಕ್ ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ಕಟ್ಟಡದ ಬಗ್ಗೆ ಅರಿವಿರುವವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

Ads on article

Advertise in articles 1

advertising articles 2

Advertise under the article