-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬಡಜನರಿಗೆ ಶಕ್ತಿ ಕೊಟ್ಟದ್ದು ಕಾಂಗ್ರೆಸ್, ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತಾ? - AICC ಅಧ್ಯಕ್ಷ ಖರ್ಗೆ

ಬಡಜನರಿಗೆ ಶಕ್ತಿ ಕೊಟ್ಟದ್ದು ಕಾಂಗ್ರೆಸ್, ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತಾ? - AICC ಅಧ್ಯಕ್ಷ ಖರ್ಗೆ




ಮಂಗಳೂರು: ದೇಶದಲ್ಲಿ ಹಲವು ಯೋಜನೆಗಳ ಬಡಜನರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಜನತೆ ಮೋದಿ ಮೋದಿ ಎನ್ನುತ್ತಿದ್ದಾರೆ. ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತದೆಯ ಎಂದು ಅಖಿಲ ಭಾರತ‌ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.




ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.


ಭೂ ಮಸೂದೆ ಕಾನೂನು ತಂದು ಉಳುವವನಿಗೆ ಭೂಮಾಲಕನನ್ನು‌ ಮಾಡಿದ್ದು ಕಾಂಗ್ರೆಸ್. ಇದರಿಂದ ಯಾರು ಲಾಭ ಪಡೆದರೋ ಅವರು ಅದನ್ನು ಮರೆತರು. ಸೋನಿಯಾಗಾಂಧಿ ಆಹಾರಭದ್ರತೆ ಕಾನೂನು, ಉಚಿತ ಶಿಕ್ಷಣ ಕಾನೂನು ಮಾಡಿದರು.ಜನರು ಅದನ್ನು ಮರೆತರು. ಕಾಂಗ್ರೆಸ್ ಪಕ್ಷದಿಂದ ಲಾಭ ಪಡೆದು ಮೋದಿಗೆ ಜೈ ಜೈ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.


ಮೋದಿ ಜನತೆಗೆ ಜಮೀನು ಕೊಟ್ನಾ, ಮೋದಿ ಆಹಾರ ಭದ್ರತೆ ಕಾಯ್ದೆ ತಂದ್ರ, ಮೋದಿ ಹೇಳಿದಂತೆ ಉದ್ಯೋಗ ಕೊಟ್ರಾ? 15 ಲಕ್ಷ ಕೊಟ್ರಾ. ದೇಶದ ಪ್ರಧಾನಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದರು.


ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತದೆಯ. ಜನರಿಗೆ ವಿದ್ಯಾಭ್ಯಾಸ, ಅನ್ನ ಯೋಜನೆ ನೀಡಿದ್ದು ಕಾಂಗ್ರೆಸ್ ಸರಜಾರ. ಬಿಜೆಪಿ ಸರಕಾರ ಕೇವಲ ಜಗಳ ಹಚ್ಚುತ್ತದೆ. ಜನರನ್ನು ಮಾಲೀಕರನ್ನಾಗಿ ಮಾಡಿದ್ದು ನಾವು. ಆದರೆ ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್ ಬೈಯುತ್ತಾರೆ . ಯಾರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೋ ಅವರು ಬಡವರು ಹಿಂದುಳಿದವರನ್ನು ತುಳಿಯುತ್ತಾರೆ ಎಂದರು.

 ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳನ್ನು ಜನರು ಮರೆತರು.  ಕನಿಷ್ಠ  ರಾಜ್ಯ ಸರಕಾರ‌ ನೀಡಿರುವ 5 ಗ್ಯಾರಂಟಿಯನ್ನಾದರೂ ನೆನಪಿನಲ್ಲಿಟ್ಟುಕೊಳ್ಳಿ. ಹಿಂದೆ ಮಾಡಿದಂತೆ ಮಾಡಬೇಡಿ ಎಂದರು

Ads on article

Advertise in articles 1

advertising articles 2

Advertise under the article

ಸುರ