-->

ಪ್ರೇಮಿಗಳ ದಿನಾಚರಣೆ ಆಫರ್ - ಓಲಾ‌ಸ್ಕೂಟರ್ 84,999 ರೂ‌. ಬೆಲೆಗೆ ಲಭ್ಯ

ಪ್ರೇಮಿಗಳ ದಿನಾಚರಣೆ ಆಫರ್ - ಓಲಾ‌ಸ್ಕೂಟರ್ 84,999 ರೂ‌. ಬೆಲೆಗೆ ಲಭ್ಯ


ಬೆಂಗಳೂರು: ಪ್ರೇಮಿಗಳ ದಿನಾಚರಣೆ ಹಿನ್ನಲೆಯಲ್ಲಿ ಫೆಬ್ರವರಿ 16-29ರವರೆಗೆ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಬಂಪರ್ ಆಫರ್ ಘೋಷಿಸಿದೆ. ಓಲಾ ಇಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಒಲಾ S1 Pro,  S1 ಏರ್ ಹಾಗೂ S1 X+ ಮಾಡೆಲ್‌ಗೆ ರಿಯಾಯಿತಿ ಆಫರ್ ಘೋಷಿಸಲಾಗಿದೆ. ಎಲ್ಲಾ ಮಾಡೆಲ್ ಗಳ ಮೇಲೆ ಗರಿಷ್ಠ 25,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಆದ್ದರಿಂದ ಒಲಾ S1 X+ ಸ್ಕೂಟರ್ 84,999 ರೂ‌ ಬೆಲೆಯ ರಿಯಾಯಿತಿ ದರದಲ್ಲಿ ದೊರಕಲಿದೆ. ಡಿಸ್ಕೌಂಟ್ ಆಫರ್‌ಗೂ ಮುನ್ನ ಈ ಸ್ಕೂಟರ್ ಬೆಲೆ 1,09,999 ರೂಪಾಯಿ ಇತ್ತು.

ಭಾರತದಲ್ಲಿ ಇಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಕಂಪೆನಿಗಳು ಇಲೆಕ್ಟ್ರಿಕ್ ಸ್ಕೂಟರ್ ಗಳನ್ನು ಉತ್ಪಾದಿಸುತ್ತಿದೆ. ಮುಂಚೂಣಿಯಲ್ಲಿರುವ ಕಂಪೆನಿಗಳ ಪೈಕಿ ಓಲಾ ಇಲೆಕ್ಟ್ರಿಕ್ ಕೂಡ ಒಂದು. ಪ್ರೇಮಿಗಳ ದಿನಾಚರಣೆ ತಿಂಗಳಾಗಿರುವ ಫೆಬ್ರವರಿಯಲ್ಲಿ ಒಲಾ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಫೆಬ್ರವರಿ 16 ರಿಂದ ಫೆಬ್ರವರಿ 29ರ ವರೆಗೆ ಡಿಸ್ಕೌಂಟ್ ಆಫರ್ ಚಾಲ್ತಿಯಲ್ಲಿದೆ.

ಓಲಾ  S1 ಏರ್ ಇಲೆಕ್ಟ್ರಿಕ್ ಸ್ಕೂಟರ್ ಬೆಲೆ 1,19,999 ರೂಪಾಯಿಯಿಂದ ಡಿಸ್ಕೌಂಟ್ ಬಳಿಕ 1,04,999 ರೂಪಾಯಿಗೆ(ಎಕ್ಸ್ ಶೋ ರೂಂ ಬೆಲೆ) ಇಳಿಕೆಯಾಗಿದೆ. ಓಲಾ S1 Pro ಸ್ಕೂಟರ್ ಡಿಸ್ಕೌಂಟ್ ಬೆಲೆ 1,29,999 ರೂಪಾಯಿ(ಎಕ್ಸ್ ಶೋರೂಂ). ಡಿಸ್ಕೌಂಟ್ ಆಫರ್‌ಗೂ ಮೊದಲು ಈ ಸ್ಕೂಟರ್ ಬೆಲೆ 1,47,499 ರೂಪಾಯಿ ಆಗಿತ್ತು. ಈ ಆಫರ್ ಜೊತೆಗೆ ಸುಲಭ ಕಂತು, ಅತೀ ಕಡಿಮೆ ಬಡ್ಡಿದರ ಶೇಕಡಾ 7.99ರಲ್ಲಿ ಸಾಲ ಸೌಲಭ್ಯ, ಶೂನ್ಯ ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ಹಲವು ಇತರ ಸೌಲಭ್ಯಗಳಳನ್ನು ಓಲಾ ನೀಡುತ್ತಿದೆ.

ಜನವರಿ ತಿಂಗಳಲ್ಲಿ ಒಲಾ S1 X+  ಸ್ಕೂಟರ್ ಮೇಲೆ ಇದೇ ರೀತಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿತ್ತು. 20,000 ರೂಪಾಯಿ ಡಿಸ್ಕೌಂಟ್ ಹಾಗೂ ವಾರೆಂಟ್ ಆಫರ್ ಘೋಷಿಸಿತ್ತು.


Ads on article

Advertise in articles 1

advertising articles 2

Advertise under the article