ಉಝ್ಬೇಕಿಸ್ತಾನದಲ್ಲಿ ಭಾರತೀಯ ಪ್ರಜೆಗೆ 20ವರ್ಷ ಕಾರಾಗೃಹ ಶಿಕ್ಷೆ


ತಾಸ್ಕೆಂಟ್ : ಕಲುಷಿತ ಕೆಮ್ಮಿನ ಸಿರಪ್ ಸೇವನೆ ಮಾಡಿ 68ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಉಝ್ಬೇಕಿಸ್ತಾನದ ನ್ಯಾಯಾಲಯವು ಭಾರತೀಯ ಪ್ರಜೆಗೆ 20 ವರ್ಷ ಜೈಲುಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಉತ್ತರಪ್ರದೇಶ ಮೂಲದ ಔಷಧ ಉತ್ಪಾದಕ ಸಂಸ್ಥೆ `ಮರಿಯೊನ್ ಬಯೊಟೆಕ್ಸ್' ಸಂಸ್ಥೆ ಉಝೇಕಿಸ್ತಾನದಲ್ಲಿ ಉತ್ಪಾದಿಸಿದ ಕೆಮ್ಮಿನ ಸಿರಪ್‌ನ ವಿತರಕ ಸಂಸ್ಥೆಯ ಸಿರಪ್ ಸೇವಿಸಿ 68ಮಕ್ಕಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ `ಕ್ಯುರಮಾಕ್ಸ್ ಮೆಡಿಕಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ ಪ್ರತಾ‌ರ್ ಸೇರಿದಂತೆ 23 ಮಂದಿಗೆ ತಲಾ 20 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಉಝ್ಬೇಕಿಸ್ತಾನದ ಉನ್ನತ ಮೂಲಗಳು ಉಲ್ಲೇಖಿಸಿರುವ ವರದಿ ಹೇಳಿದೆ.
BREAKING NEWS
Loading latest news...
Join our WhatsApp Channel Powered By : Online Pudu