ವೃಷಭ ರಾಶಿ
ಈ ತಿಂಗಳು ನಿಮಗೆ ಒತ್ತಡ ಜವಾಬ್ದಾರಿ ಹೆಚ್ಚು. ಕುಟುಂಬದಲ್ಲಿ ಹಾಗೂ ವೃತ್ತಿಸ್ಥಾನದಲ್ಲಿ ಜವಾಬ್ದಾರಿ ಹೆಚ್ಚು ನಿಭಾಯಿಸ ಬೇಕಾಗುತ್ತದೆ. ಇದು ನಿಮಗೆ ಹೊರೆ ಎನಿಸಿದರೂ ಲಾಭ ಸ್ಥಾನದ ರಾಹು ನಿಮಗೆ ಶಕ್ತಿಯನ್ನೂ ಛಾತಿಯನ್ನೂ ಕೊಟ್ಟು ಎಲ್ಲವನ್ನೂ ನಿಭಾಯಿಸುವಂತೆ ಮಾಡುತ್ತಾನೆ. ನಿಮಗೆ ಒಳ್ಳೆಯ ಹೆಸರು ಗಳಿಸಲು ಈ ಜವಾಬ್ದಾರಿಗಳು ಸಹಾಯ ಮಾಡುತ್ತವೆ.
ಮಿಥುನ ರಾಶಿ
ಈ ಮಾಸ ಪೂರ್ತಿಯಾಗಿ ನಿಮಗೆ ಗುರುಬಲ ಇರುವುದರಿಂದ ಯಾವುದಕ್ಕೂ ಯೋಚನೆ ಇಲ್ಲ. ವೃತ್ತಿಯಲ್ಲಿ ಯಶಸ್ಸು ಕೌಟುಂಬಿಕ ಸುಖಶಾಂತಿ ಎಲ್ಲವೂ ಇದೆ. ಕೋರ್ಟ್ ಕೆಲಸಗಳಲ್ಲಿ ಜಯ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ವಿದೇಶ ಪ್ರಯಾಣ ಮಾಡುವ ಯೋಗ ಇದೆ. ಉದ್ಯೋಗದಲ್ಲಿ ಯಶಸ್ಸು ಪ್ರಶಂಸೆ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ವೃತ್ತಿಯಲ್ಲಿ ಒತ್ತಡ ಹೆಚ್ಚಾಗಬಹುದು. ಈಗಿಂದಲೇ ತಯಾರಾಗಿ ಇರಿ.
ಕನ್ಯಾ ರಾಶಿ
ಶನಿ ಆರನೇ ಮನೆಯಲ್ಲಿ ಇದ್ದು ಬಹಳ ಧನಲಾಭ ಕೊಡುತ್ತಾನೆ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕೊಡುತ್ತಾನೆ. ಯಾವುದೇ ಅಡೆತಡೆ ಬರದಂತೆ ಜೀವನ ಸರಾಗವಾಗಿ ನಡೆಯುವಂತೆ ಅನುಗ್ರಹಿಸುತ್ತಾನೆ. ಹೊಸ ಹೊಸ ಯೋಜನೆಗಳಲ್ಲಿ ಹಣ ತೊಡಗಿಸಿ ಲಾಭ ಮಾಡಿಕೊಳ್ಳಿ. ಯಾವುದಾದರೂ ಹಣ ಬಾಕಿಯಾಗಿ ಉಳಿದಿದ್ದರೆ ಈಗ ವಸೂಲಾಗುತ್ತದೆ.
ಧನಸ್ಸು ರಾಶಿ
ಈಗ ನಿಮಗೆ ಹಗ್ಗವೂ ಹೂಮಾಲೆಯಾಗುವ ಸಮಯ. ನೀವು ಮುಟ್ಟಿದ್ದೆಲ್ಲ ಚಿನ್ನ. ಏಳು ವರ್ಷಗಳ ನಂತರ ಒಳ್ಳೆಯ ಸಂಗತಿಗಳನ್ನು ಕಾಣುತ್ತ ಇದ್ದೀರಿ. ಮಕ್ಕಳಿಂದ ಶುಭಫಲಗಳಿವೆ. ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ. ವಿದ್ಯಾಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗ ಮಾಡುತ್ತಿರುವವರು, ಉನ್ನತ ಪರೀಕ್ಷೆಗಳನ್ನು ಬರೆದವರಿಗೂ ಉತ್ತಮ ಫಲಿತಾಂಶ ದೊರೆಯುತ್ತದೆ.
ಮಕರ ರಾಶಿ
ಆರು ವರ್ಷಗಳಿಂದ ಕಷ್ಟ ಪಟ್ಟಿದ್ದೀರಿ. ಈಗ ನಿಮಗೆ ನೆಮ್ಮದಿಯಾಗಿ ಉಸಿರಾಡುವ ಸಮಯ. ಅವಕಾಶಗಳು ನಿಮ್ಮ ಜೋಳಿಗೆಗೆ ಬಂದು ಬೀಳುತ್ತವೆ. ಆದರೆ ಸರಿಯಾದ ಆಯ್ಕೆ ನಿಮ್ಮ ಬುದ್ಧಿ ಮನಸ್ಸು ಉಪಯೋಗಿಸಿ ನೀವೇ ಮಾಡಬೇಕು. ಮೂರನೇ ಮನೆಯಲ್ಲಿ ರಾಹು ನಿಮಗೆ ಬಹಳ ಶಕ್ತಿಯನ್ನು ಕೊಡುತ್ತಾನೆ.
ಮೀನ ರಾಶಿ
ಶನಿ 12ನೇ ಮನೆಯಲ್ಲಿ ರಾಹು ನಿಮ್ಮ ರಾಶಿಯಲ್ಲಿ, ಕೇತು ಏಳನೇ ಮನೆಯಲ್ಲಿ ಇರುವುದು ಅಷ್ಟೆನೂ ಶುಭಕರವಲ್ಲ. ದೈಹಿಕ ಶ್ರಮ ಜಾಸ್ತಿ. ಗುರು ಎರಡನೇ ಮನೆಯಲ್ಲಿ ಇರುವುದು ನಿಮಗೆ ಶನಿ ರಾಹುವಿನ ಒತ್ತಡವನ್ನು ನಿವಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಶ್ರಮದ ನಡುವೆಯೂ ಗುರುಬಲ ನಿಮ್ಮನ್ನು ಕಾಪಾಡುತ್ತದೆ.