ನ್ಯೂಜಿಲೆಂಡ್ ಸಂಸದೆಯಿಂದ ಬಟ್ಟೆ ಕಳ್ಳತನ ಪ್ರಕರಣ- ರಾಜೀನಾಮೆ!
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಸಂಸದೆಯೊಬ್ಬರು ಬಟ್ಟೆ ಅಂಗಡಿಗಳಲ್ಲಿ ಕಳ್ಳತನ ಮಾಡಿದ ಆರೋಪಕ್ಕೆ ತುತ್ತಾಗಿದ್ದಾರೆ. ಇದರ ಬೆನ್ನಲ್ಲೇ ಸಂಸದೆ ಗೋಲ್‌ರಿಜ್ ಘಹರಮಾನ್ (Golriz Ghahraman) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ವೈಯಕ್ತಿಕ ಒತ್ತಡ ಮತ್ತು ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಂಗಡಿ ಕಳ್ಳತನದ ಹಲವು ಆರೋಪಗಳ ನಂತರ ನ್ಯೂಜಿಲೆಂಡ್ ಸಂಸದ ರಾಜೀನಾಮೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ರೀನ್ ಪಾರ್ಟಿಯ ಗೋಲ್ರಿಜ್ ಘಹ್ರಾಮನ್ ಎರಡು ಬಟ್ಟೆ ಅಂಗಡಿಗಳಿಂದ ಮೂರು ಬಾರಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ . ಒಂದು ಆಕ್ಲೆಂಡ್‌ನಲ್ಲಿ ಮತ್ತು ಇನ್ನೊಂದು ವೆಲ್ಲಿಂಗ್‌ಟನ್‌ನಲ್ಲಿ ಕಳವು ಮಾಡಲಾಗಿದೆ.
ನ್ಯೂಜಿಲ್ಯಾಂಡ್ ಸಂಸತ್‌ಗೆ ಆಯ್ಕೆಯಾದ ಮೊದಲ ವಲಸಿಗ ಸಂಸದೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದರು.