-->

ಮಂಗಳೂರು: ನೇಮದ ಸೇವೆಯಲ್ಲಿದ್ದಾಗಲೇ ತೀವ್ರ ಎದೆನೋವು - ಇಹಲೋಕ ತ್ಯಜಿಸಿದ ದೈವನರ್ತಕ

ಮಂಗಳೂರು: ನೇಮದ ಸೇವೆಯಲ್ಲಿದ್ದಾಗಲೇ ತೀವ್ರ ಎದೆನೋವು - ಇಹಲೋಕ ತ್ಯಜಿಸಿದ ದೈವನರ್ತಕ

ಮಂಗಳೂರು: ನೇಮದ ಸೇವೆಯಲ್ಲಿದ್ದಾಗಲೇ‌ಪ್ರಖ್ಯಾತ ದೈವ ನರ್ತಕ ಅಶೋಕ್ ಬಂಗೇರ ಗಂಧಕಾಡು(47) ಅವರು ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. 

ನಿನ್ನೆ ರಾತ್ರಿ ಅವರಿಗೆ ನಗರದ ಹೊರವಲಯದ ಹಳೆಯಂಗಡಿಯಲ್ಲಿ ಲೆಕ್ಕೇಸಿರಿ ದೈವದ ನೇಮದ ಸೇವೆಯಿತ್ತು. ಅಲ್ಲಿ ಅವರು ದೈವನರ್ತನದಲ್ಲಿದ್ದ ಕೊನೆಯ ಘಳಿಗೆಯ ವೀಡಿಯೋ ಲಭ್ಯವಾಗಿದೆ. ಅಶೋಕ್ ಬಂಗೇರ ಗಂಧಕಾಡು ಅವರಿಗೆ ಗಗ್ಗರ ಸೇವೆಯಲ್ಲಿದ್ದಾಗಲೇ ತೀವ್ರ ಬಳಲಿಕೆ ಕಂಡು ಬಂದಿದೆ. ಆದ್ದರಿಂದ ಮುಂದಿನ ದೈವಾರಾಧನೆಯ ಕ್ರಮಮವಾದ ಸಂಧಿ ಹೇಳುವ ಕ್ರಮ, ಅಣಿಯನ್ನು ಏರಿ ದೈವನರ್ತನ ಸೇವೆಯನ್ನು ಪೂರೈಸಿದೆ ಅದಕ್ಕಿಂತ ಮೊದಲೇ ಅವರು ದೈವದ ಬಣ್ಣವನ್ನು ಕಳಚಿದ್ದಾರೆ. ಆ ಬಳಿಕ ನೇಮವನ್ನು ಅವರ ತಮ್ಮ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ.

ಆ ಬಳಿಕ‌ ತೀವ್ರ ಎದೆನೋವು ಕಾಣಿಸಿಕೊಂಡ ಅಶೋಕ್ ಬಂಗೇರ ಗಂಧಕಾಡು‌ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ. ಪದವಿನಂಗಡಿ ಗಂಧಕಾಡುವಿನಲ್ಲಿ ಕೊರಗಜ್ಜ ದೈವದ ಸಾನಿಧ್ಯ ರಚಿಸಿ ಅವರು ಸೇವೆಯಲ್ಲಿ ತೊಡಗಿದ್ದರು.

ತೀವ್ರವಾದ ಸಕ್ಕರೆ ರೋಗದಿಂದ ಬಳಲುತ್ತಿದ್ದ ಅಶೋಕ್ ಬಂಗೇರ ಗಂಧಕಾಡು ಅವರು ಈ ಬಾರಿಯಿಂದ ನೇಮಕಟ್ಟುವುದನ್ನು ತ್ಯಜಿಸಲು ನಿರ್ಧರಿಸಿದ್ದರು. ಆದರೆ ಇದೇ ಕೊನೆಯ ಬಾರಿ ಎಂದು ಅವರು ನಿನ್ನೆ ಹಳೆಯಂಗಡಿಯಲ್ಲಿ ನಡೆದ ಲೆಕ್ಕೇಸಿರಿ ದೈವದ ನೇಮ ಕಟ್ಟಿದ್ದರು. ಆದರೆ ವಿಧಿಯಾಟ ಬೇರೆಯೇ ಇದ್ದು, ಇದೇ ಅವರ ಕೊನೆಯದಾದ ದೈವನರ್ತನವಾಗಿತ್ತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article