-->
1000938341
ಅಯೋಧ್ಯೆಯಲ್ಲಿ ಕಣ್ಣಾವಲಿಗೆ ಉಡುಪಿಯ ಬೈನಾಕ್ಯೂಲರ್ !

ಅಯೋಧ್ಯೆಯಲ್ಲಿ ಕಣ್ಣಾವಲಿಗೆ ಉಡುಪಿಯ ಬೈನಾಕ್ಯೂಲರ್ !ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೂ ಕರ್ನಾಟಕಕ್ಕೂ ಅವಿನಾ ಭಾವಸಂಬಂಧ  ಇದೆ. ಪೇಜಾವರಶ್ರೀಗಳುಸೇರಿ ಅಯೋಧ್ಯೆಯ ರಾಮಮಂದಿರದ ಕೈಂಕರ್ಯದಲ್ಲಿ ಹಲವರು ತೊಡಗಿಸಿಕೊಂಡಿದ್ದರೆ, ಇದೀಗ ಅಯೋಧ್ಯೆ ಸುರಕ್ಷತೆಗೆ ಬಳಸುತ್ತಿರುವ ದೂರದರ್ಶಕಗಳಿಗೂ ಉಡುಪಿಯ ನಂಟಿರುವುದು ಬೆಳಕಿಗೆ ಬಂದಿದೆ.


ತನ್ನ ದೂರದರ್ಶಕ ಸೂತ್ರಕ್ಕೆ ಪೇಟೆಂಟ್ ಪಡೆದಿರುವ ಮಣಿಪಾಲದ ಎಂಐಟಿ ಉದ್ಯೋಗಿ ಆ‌ರ್.ಮನೋಹರ್‌ ಅವರು ಸಿದ್ದಪಡಿಸಿದ ದೂರದರ್ಶಕಗಳನ್ನು ಅಯೋಧ್ಯೆಯ ಸುರಕ್ಷತೆಗೆ ಬಳಸಲಾಗುತ್ತಿದೆ. ಭದ್ರತಾ ಸಂಸ್ಥೆಯೊಂದರ ಬೇಡಿಕೆ ಮೇಲೆ ಈಗಾಗಲೇ 25 ವಿಶೇಷ ದೂರದರ್ಶಕವನ್ನು ತಯಾರಿಸಿ ಕಳುಹಿಸಿಕೊಟ್ಟಿರುವುದಾಗಿ ಮನೋಹರ್ ಮಾಹಿತಿ ನೀಡಿದ್ದಾರೆ. 


ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಯೊಂದರ ಮೂಲಕ ಸುಮಾರು 50 ದೂರದರ್ಶಕಗಳಿಗೆ ಬೇಡಿಕೆ ಬಂದಿತ್ತು. ಈಗಾಗಲೇ 25 ದೂರದರ್ಶಕಗಳನ್ನು ತಯಾರಿಸಿ ಕಳುಹಿಸಿದ್ದೇನೆ, ಉಳಿದ ದೂರದರ್ಶಕಗಳನ್ನು ನಿರ್ಮಿಸುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. 


ಮನೋಹ‌ರ್ ಅವರು ಮೂಲತಃ ಮೈಸೂರಿನವರು. ಆದರೆ ಉಡುಪಿಯ ಪರ್ಕಳದಲ್ಲಿ ಹಲವು ವರ್ಷ ಗಳಿಂದ ನೆಲೆಸಿದ್ದಾರೆ.ಎಂಜಿನಿಯ‌ರ್ ಆಗಿರುವ ಮನೋಹರ್ ಅವರು ದೂರದರ್ಶಕಗಳಿಗಾಗಿ ತಮ್ಮದೇ ಆದ ಸೂತ್ರವೊಂದನ್ನು ಸಿದ್ಧಪಡಿಸಿದ್ದು, ಅದಕ್ಕಾಗಿ ಪೇಟೆಂಟ್ ಪಡೆದಿದ್ದಾರೆ. ತಮ್ಮ ಫೀಲ್ಡ್‌ ಕಿಂಗ್ ಆಪ್ಟಿಕ್ಸ್ ಹೆಸರಿನಲ್ಲಿ ಬೇಡಿಕೆ ಆಧಾರದಲ್ಲಿ ದೂರದರ್ಶಕಗಳನ್ನು ತಯಾರಿಸಿ ಪೂರೈಸುತ್ತಾರೆ. ಈಗಾಗಲೇಅಯೋಧ್ಯೆ ರಾಮಮಂದಿರದ ಲೈಟಿಂಗ್ ಹೊಣೆಗಾರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ರಾಜೇಶ್ ಶೆಟ್ಟಿ ಅವರ ಸಂಸ್ಥೆ ವಹಿಸಲಾಗಿದೆ.

Ads on article

Advertise in articles 1

advertising articles 2

Advertise under the article