ಮಲ್ಪೆ : ಕೆಂಡ ಸೇವೆ ವೇಳೆ ಕೆಂಡದ ರಾಶಿಗೆ ಬಿದ್ದ ಅಯ್ಯಪ್ಪ ಮಾಲಾಧಾರಿ - ತೀವ್ರ ಗಾಯ
Wednesday, January 3, 2024
ಮಲ್ಪೆ: ಇಲ್ಲಿನ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಕೆಂಡ ಸೇವೆನಡೆಯುತ್ತಿದ್ದಾಗ ಅಯ್ಯಪ್ಪ ಮಾಲಾಧಾರಿಯೊಬ್ಬರು ಕೆಂಡದ ರಾಶಿಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಇದೀಗ ಗಾಯಾಳು ಅಯ್ಯಪ್ಪ ಮಾಲಾಧಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಅಯ್ಯಪ್ಪ ಮಾಲಾಧಾರಿಗಳ ಕೆಂಡ ಸೇವೆ ನಡೆಯುತ್ತಿರುತ್ತದೆ. ಅದರಂತೆ ಕೆಂಡ ಹಾಯುವ ವೇಳೆ ಅಯ್ಯಪ್ಪ ಮಾಲಾಧಾರಿ ಆಯತಪ್ಪಿ ಕೆಂಡದ ರಾಶಿಗೆ ಬಿದ್ದಿದ್ದಾರೆ. ತಕ್ಷಣ ಇತರ ಮಾಲಾಧಾರಿಗಳು ಅವರ ಸಹಾಯಕ್ಕೆ ಬಂದಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮಾಲಾಧಾರಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.