ದೀರ್ಘದಂಡ ನಮಸ್ಕಾರ ಮಾಡುತ್ತಾ ರಾಮಲಲ್ಲಾ ದರ್ಶನ ಮಾಡಲಿದ್ದಾರೆ ಈ ದಂಪತಿ - 550ಕಿ.ಮೀ. ಮೂರು ತಿಂಗಳಲ್ಲಿ ಪ್ರಯಾಣ
Sunday, January 21, 2024
ಬಿಹಾರ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಯಿಂದ ಭಕ್ತರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಬಿಹಾರದ ಮಿಥಿಲಾ ಮೂಲದ ದಂಪತಿಯೂ ರಾಮಲಲ್ಲಾನ ದರ್ಶನಕ್ಕೆ ಹೊರಟಿದ್ದಾರೆ. ಇದರಲ್ಲೇನು ವಿಶೇಷ ಅಂದ್ಕೊಂಡಿದ್ದಾರ. ಇವರು ಮೂರು ತಿಂಗಳ ಹಿಂದೆ ಹೊರಟಿದ್ದು, ಇನ್ನು ಎರಡು ತಿಂಗಳ ಬಳಿಕ ಈ ದಂಪತಿ ಅಯೋಧ್ಯೆ ತಲುಪಲಿದ್ದಾರೆ.
ವಿಜಯದಶಮಿಯಂದು ಅಂದರೆ, 24 ಅಕ್ಟೋಬರ್ 2023 ರಂದು, ಕಾಮೇಶ್ವರ್ ಕುಮಾರ್ ಮಿಶ್ರಾ ಹಾಗೂ ಅವರ ಪತ್ನಿ ಆವಂತಿಕಾ ಮಿಶ್ರಾ ಎಂಬ ರಾಮಭಕ್ತರು ಬಿಹಾರದ ಮಿಥಿಲಾ ದರ್ಭಾಂಗದಲ್ಲಿರುವ ಅಹಲ್ಯಾ ದೇವಸ್ಥಾನದಿಂದ ದಂಡಿಯಾತ್ರೆಯನ್ನು ಆರಂಭಿಸಿದ್ದಾರೆ. ಶ್ರೀರಾಮನ ದರ್ಶನಕ್ಕೆ ಪತಿ-ಪತ್ನಿ 300 ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಿ ಕುಶಿನಗರ ತಲುಪಿದರು.
ಶ್ರೀರಾಮನ ದರ್ಶನಕ್ಕಾಗಿ 3 ತಿಂಗಳ ಹಿಂದೆ ಮಿಥಿಲಾದಿಂದ ಹೊರಟಿದ್ದ ಇವರು ಇದೀಗ ಕುಶಿನಗರ ತಲುಪಿದ್ದಾರೆ. ಇವರು ದೀರ್ಘದಂಡ ನಮಸ್ಕಾರ ಮಾಡುತ್ತಾ ಯಾತ್ರೆಯ ಮೂಲಕ ಸುಮಾರು 550 ಕಿಲೋಮೀಟರ್ ದೂರ ದಂಪತಿ ಕ್ರಮಿಸಿ ಅಯೋಧ್ಯೆ ತಲುಪಲಿದ್ದಾರೆ. ರಾಮಮಂದಿರದಲ್ಲಿ ರಾಮಲಲ್ಲಾನ ಸನ್ನಿಧಿ ಮತ್ತು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಉತ್ಸಾಹ ಹೆಚ್ಚುತ್ತಿದೆ. ಹೀಗಿರುವಾಗ ಪತಿ-ಪತ್ನಿ ಖುಷಿನಗರಕ್ಕೆಆಗಮಿಸಿದಾಗ ಇಲ್ಲಿನ ಜನತೆ ಸ್ವಾಗತಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ 200 ಕಿಲೋಮೀಟರ್‌ಗಳ ಮುಂದಿನ ಪ್ರಯಾಣವನ್ನು ಇಬ್ಬರೂ ಕ್ರಮಿಸಿ ಅಯೋಧ್ಯೆ ತಲುಪಲಿದ್ದಾರೆ.