-->

ಜ.11ರಂದು "ಶಿವದೂತೆ ಗುಳಿಗೆ" 555ನೇ ಪ್ರದರ್ಶನದ ಸಂಭ್ರಮ!ನಟ ರಕ್ಷಿತ್ ಶೆಟ್ಟಿ, ಅನುಶ್ರೀ, ಗುರುಕಿರಣ್ ತಾರಾ ಮೆರುಗು

ಜ.11ರಂದು "ಶಿವದೂತೆ ಗುಳಿಗೆ" 555ನೇ ಪ್ರದರ್ಶನದ ಸಂಭ್ರಮ!ನಟ ರಕ್ಷಿತ್ ಶೆಟ್ಟಿ, ಅನುಶ್ರೀ, ಗುರುಕಿರಣ್ ತಾರಾ ಮೆರುಗು


ಮಂಗಳೂರು: "ಜನವರಿ 11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜನಮೆಚ್ಚುಗೆ ಪಡೆದಿರುವ "ಶಿವದೂತೆ ಗುಳಿಗೆ" ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ" ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


"ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಸಾಲಿಯಾನ್ ಅವರಿಗೆ ದಿ. ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಖ್ಯಾತ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಿರೂಪಕಿ ಅನುಶ್ರೀ ಉಪಸ್ಥಿತರಿರಲಿದ್ದಾರೆ.


ಅಧ್ಯಕ್ಷತೆಯನ್ನು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ವಹಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಆರ್.ಕೆ. ನಾಯರ್, ಪದ್ಮರಾಜ್ ಆರ್., ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಬಿ. ನಾಗರಾಜ್ ಶೆಟ್ಟಿ, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಎಸಿಪಿ ಎಸ್. ಮಹೇಶ್ ಕುಮಾರ್, ಕಾಸರಗೋಡು ಚಿನ್ನಾ, ಕುಮಾರ್ ಎನ್. ಬಂಗೇರ, ಹರೀಶ್ ಬಂಗೇರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ" ಎಂದರು. 


ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಶೆಟ್ಟಿ, ಪ್ರಜಿತ್, ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಕೋಕಿಲ, ಚಂದ್ರ ಕೊಡಿಯಾಲ್ ಬೈಲ್, ಪ್ರೇಮ್ ಶೆಟ್ಟಿ ಸುರತ್ಕಲ್, ನಿತೇಶ್ ಪೂಜಾರಿ ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article