Ullal- ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು




ಮಂಗಳೂರು: ಸಮುದ್ರದಲ್ಲಿ ಈಜಲು‌ ತೆರಳಿದ ಇಬ್ಬರು ಸಮುದ್ರಪಾಲಾದ ಘಟನದ  ಮಂಗಳೂರು ಹೊರವಲಯದ ಉಳ್ಳಾಲ ಕಡಲ ತೀರದಲ್ಲಿ ನಡೆದಿದೆ


ಸಮುದ್ರ ಪಾಲಾದ ಓರ್ವನ ಶವ ಪತ್ತೆ, ಇನ್ನೋರ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ.  ಓರ್ವನನ್ನು ರಕ್ಷಣೆ ಮಾಡಲಾಗಿದೆ


ಉಳ್ಳಾಲ ದರ್ಗಾ ಸಂದರ್ಶನಗೈಯ್ಯಲು ಬಂದಿದ್ದ ಚಿಕ್ಕಮಗಳೂರು ನಿವಾಸಿಗಳಾದ ಬಶೀರ್ (23),  ಸಲ್ಮಾನ್ (19), ಸೈಫ್ ಆಲಿ (27) ಉಳ್ಳಾಲ ಕಡಲ ತೀರಕ್ಕೆ ಬಂದಿದ್ದರು.ಇದರಲ್ಲಿ  ಬಶೀರ್ ಸಮುದ್ರ ಪಾಲಾಗಿದ್ದು, ಸಲ್ಮಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸೈಫ್ ಆಲಿಯನ್ನ ಸ್ಥಳೀಯ ಜೀವರಕ್ಷಕ ತಂಡ ರಕ್ಷಿಸಿದೆ.


ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ