ಉಡುಪಿ: 'ನನಗೆ ಕೆಲಸ ಮಾಡಲು ಇಷ್ಟವಿರುವುದಿಲ್ಲ. ನಾನು ಸ್ವಾಮೀಜಿ ಆಗುತ್ತೇನೆ' ಎಂದು ಹೇಳುತ್ತಿದ್ದ ಯುವಕನೊಬ್ಬ ಮನೆ ಬಿಟ್ಟು ಹೋದ ಘಟನೆ ಉಡುಪಿ ಜಿಲ್ಲೆಯ ತ್ರಾಸಿ ಗ್ರಾಮದ ಆನಗೋಡಿನಲ್ಲಿ ನಡೆದಿದೆ.
ಆನಗೊಡಿನಬಾಬು ಅವರ ಪುತ್ರ ಗುರುರಾಜ(25) ಮನೆ ಬಿಟ್ಟುಹೋದ ಯುವಕ. ಈತ ಒಂದು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು, ಮನೆಯವರು ಕೇಳಿದಾಗ 'ನನಗೆ ಕೆಲಸ ಮಾಡಲು ಇಷ್ಟವಿಲ್ಲ. ನಾನು ಸ್ವಾಮೀಜಿ ಆಗುತ್ತೇನೆ' ಎಂದು ಹೇಳುತ್ತಿದ್ದ .
ಡಿ. 7ರಂದು ಬೆಳಗ್ಗೆ ತ್ರಾಸಿ ಪೇಟೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದ ಈತ ಮತ್ತೆ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.