ವಿದ್ಯಾರ್ಥಿ ಜತೆ ಮುಖ್ಯ ಶಿಕ್ಷಕಿ Romantic ಪೊಟೊ ಶೂಟ್- Kiss ಕೊಟ್ಟ ಟೀಚರ್!
Thursday, December 28, 2023
ಚಿಕ್ಕಬಳ್ಳಾಪುರ,: ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಚಿಂತಾಮಣಿ ತಾಲೂಕಿನ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಪ್ಪಲತಾ ತನ್ನ ಮಗನ ವಯಸ್ಸಿನ ವಿದ್ಯಾರ್ಥಿ ಜತೆಗೆ ಸರಸವಾಡುವ ರೀತಿಯಲ್ಲಿ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ಅಸಭ್ಯ ವಾಗಿ ವರ್ತಿಸಿದ್ದಾರೆ. ಶಿಕ್ಷಕಿಯ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಫೋಟೋಗಳು ವೈರಲ್ ಆಗಿವೆ.
ಬಾಲಕನಿಗೆ ಮುತ್ತು ಕೊಡು ವುದು ಸಹಿತ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ಪೋಷಕರು ಶಾಲೆ ಬಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಗೆ ಬಿಇಒ ಭೇಟಿ
ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.