-->
1000938341
ರಶ್ಮಿಕಾ ಡೀಪ್‌ಫೇಕ್‌ ವೀಡಿಯೋ: ನಾಲ್ವರು ಶಂಕಿತರ ವಿಚಾರಣೆ ನಡೆಸಿದ ಪೊಲೀಸರು

ರಶ್ಮಿಕಾ ಡೀಪ್‌ಫೇಕ್‌ ವೀಡಿಯೋ: ನಾಲ್ವರು ಶಂಕಿತರ ವಿಚಾರಣೆ ನಡೆಸಿದ ಪೊಲೀಸರುಹೊಸದಿಲ್ಲಿ: ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ಡೀಪ್‌ಫೇಕ್ಮಾಡಲಾಗಿದ್ದ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ದಿಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.


 ಶಂಕಿತರ ಕುರಿತು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಒದಗಿಸಿದ್ದ ಮಾಹಿತಿಯನ್ನು ಆಧರಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಶಂಕಿತರು ನಕಲಿ ಖಾತೆಗಳ ಮೂಲಕ ವೀಡಿಯೋ ಅಪ್ಲೋಡ್‌ ಮಾಡಿದ್ದಾರೆ. ಆದರೆ ಅವರೇ ವೀಡಿಯೋ ತಯಾರಿಸಿ ದವರಲ್ಲ ಎಂಬುದು ತಿಳಿದುಬಂದಿದೆ. 


ಈ ಹಿನ್ನೆಲೆಯಲ್ಲಿ ವಿಚಾರಣೆಯ ಬಳಿಕ ಶಂಕಿತರನ್ನು ಬಿಡುಗಡೆಗೊಳಿ ಸಲಾಗಿದ್ದು, ವೀಡಿಯೋ ಡೀಪ್‌ಫೇಕ್ ಮಾಡಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹಲವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article