ಅಯೋಧ್ಯೆ ಮಸೀದಿಯಲ್ಲಿ ವಿಶ್ವದ ಅತೀದೊಡ್ಡ ಕೇಸರಿ ಕುರಾನ್‌ ಗೆ ಸ್ಥಾನ


 ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ತಾಜ್ ಮಹಲ್‌ಗಿಂತಲೂ ಸುಂದರವಾಗಿರಲಿದ್ದು, ವಿಶ್ವದಲ್ಲೇ ಅತೀದೊಡ್ಡ ಗಾತ್ರದ ಕೇಸರಿ ಬಣ್ಣದ ಕುರಾನ್ ಪ್ರತಿಯನ್ನು ಹೊಂದಿರಲಿದೆ ಎಂದು ಮಸೀದಿ ಅಭಿವೃದ್ಧಿ ಸಮಿತಿ ತಿಳಿಸಿದೆ.



 ಮಸೀದ್‌ ಮೊಹಮ್ಮದ್ ಬಿನ್ ಅಬ್ದುಲ್ಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ, ಬಿಜೆಪಿ ನಾಯಕರೂ ಆಗಿರುವ ಹಜಿ ಅರ್ಥತ್ ಶೇಖ್ ಈ ಕುರಿತು ಮಾಹಿತಿ ನೀಡಿ, ಕೇಸರಿ ಬಣ್ಣದ ಕುರಾನ್ 21 ಅಡಿ ಎತ್ತರ, 36 ಅಡಿ ಅಗಲವಿರ ಲಿದೆ. ಈ ಜಾಗ ಮಸೀದಿಗಷ್ಟೇ ಅಲ್ಲ, ಆಸ್ಪತ್ರೆಗೂ ಮೀಸಲಾಗುವ ಮೂಲಕ 'ದವಾ ಹಾಗೂ ದುವಾ ಎರಡಕ್ಕೂ ಸ್ಥಾನ ಕಲ್ಪಿಸಲಿದೆ ಎಂದಿದ್ದಾರೆ.