-->
1000938341
ಐಸಿಸ್ ನೊಂದಿಗೆ ಸಂಪರ್ಕ: ಬೆಂಗಳೂರು, ಬಳ್ಳಾರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಎನ್ಐಎ ದಾಳಿ - ಹಲವರು ವಶಕ್ಕೆ

ಐಸಿಸ್ ನೊಂದಿಗೆ ಸಂಪರ್ಕ: ಬೆಂಗಳೂರು, ಬಳ್ಳಾರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಎನ್ಐಎ ದಾಳಿ - ಹಲವರು ವಶಕ್ಕೆನವದೆಹಲಿ: ಐಸಿಸ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಸೋಮವಾರ ಕರ್ನಾಟಕದ ಬೆಂಗಳೂರು, ಬಳ್ಳಾರಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

ಕರ್ನಾಟಕದ 11 ಸ್ಥಳಗಳಲ್ಲಿ, ಜಾರ್ಖಂಡ್ ನ 4 ಮಹಾರಾಷ್ಟ್ರದ 3 ಹಾಗೂ ದೆಹಲಿಯಲ್ಲಿ ಒಂದು ಕಡೆ ಸೇರಿದಂತೆ ಒಟ್ಟು 19 ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆದಿದೆ. ಕಳೆದ ವಾರ ಭಯೋತ್ಪಾದಕ ನಿಗ್ರಹ ಏಜೆನ್ಸಿ ಮಹಾರಾಷ್ಟ್ರದಲ್ಲಿ 40ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ, 15 ಮಂದಿಯನ್ನು ಅರೆಸ್ಟ್ ಮಾಡಿತ್ತು. ಬಂಧಿತರಲ್ಲಿ ಓರ್ವನು ಐಸಿಸ್ ಸಂಪರ್ಕ ಜಾಲದ ನಾಯಕನಾಗಿದ್ದು, ಹೊಸದಾಗಿ ಸೇರ್ಪಡೆಗೊಂಡವರಿಗೆ ಈತ ಪ್ರಮಾಣವಚನ ಬೋಧಿಸುತ್ತಿದ್ದ ಎಂದು ಮೂಲಗಳು ವಿವರಿಸಿವೆ.

ಎನ್ಐಎ ಈ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಶಸ್ತ್ರಾಸ್ತ್ರ ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್ ಡಿವೈಸ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿದೇಶಿ ಹ್ಯಾಂಡ್ಲರ್ ಗಳ ಸೂಚನೆಯಂತೆ ಭಾರತದಲ್ಲಿ ಐಸಿಸ್ ಸಂಪರ್ಕ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article