ಆಕೆಯನ್ನೇ ಮದುವೆಯಾಗಲು ಗಂಡಾಗಿ ಬದಲಾದಳು: ಬಳಿಕ ವಿವಾಹವಾಗಲೊಲ್ಲೆ ಎಂದ ಯುವತಿಯ ಕತ್ತು ಸೀಳಿ ಸುಟ್ಟ ಹಾಕಿದ ಪಾಪಿ


ಚೆನ್ನೈ: ಟೆಕ್ಕಿಯನ್ನು ವಿವಾಹವಾಗಲು ಲಿಂಗ ಬದಲಾಯಿಸಿಕೊಂಡಿದ್ದ ಗೆಳೆಯ, ಆಕೆಯ ಮೇಲೆ ಬ್ಲೇಡ್‌ನಿಂದ ಇರಿದು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನ ದಕ್ಷಿಣ ಹೊರವಲಯ ಕೆಲಂಬಕ್ಕಂ ಬಳಿಯ ತಲಂಬೂರ್‌ನಲ್ಲಿ ನಡೆದಿದೆ.

ಆರ್ ನಂದಿನಿ (26) ಮೃತ ಯುವತಿ. ನಂದಿನಿಯನ್ನು ಮದುವೆಯಾಗಲೆಂದು ಲಿಂಗ ಬದಲಾವಣೆ ಮಾಡಿಕೊಂಡಿದ್ದ ಎಂಬಿಎ ಪದವೀಧರ ವೆಟ್ರಿಮಾರನ್‌ನನ್ನು ನಂದಿನಿ ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ವೆಟ್ರಿಮಾರನ್ ಆಕೆಯನ್ನು ಜೀವಂತ ಸುಟ್ಟು ಹಾಕಿ ಪೊಲೀಸ್ ಅತಿಥಿಯಾಗಿದ್ದಾನೆ. ಲಿಂಗ ಬದಲಾವಣೆಗೊಳಗಾಗುವ ಮೊದಲು ಈತನ ಹೆಸರು ಪಾಂಡಿ ಮುರುಗೇಶ್ವರಿ ಎಂದಿತ್ತು.

ಆರ್ ನಂದಿನಿ ಹಾಗೂ ಪಾಂಡಿ ಮುರುಗೇಶ್ವರಿ ಮಧುರೈನಲ್ಲಿ ಒಂದೇ ಶಾಲೆಯಲ್ಲಿ ಓದಿದ್ದರು‌. ಅಲ್ಲದೆ ಆತ್ಮೀಯ ಸ್ನೇಹಿತೆಯರಾಗಿದ್ದರು. ಆದರೆ, ವೆಟ್ರಿಮಾರನ್ ಲಿಂಗ ಬದಲಾವಣೆಯ ಬಳಿಕ ನಂದಿನಿಯನ್ನು ಮದುವೆಯಾಗುವ ಪ್ರಸ್ತಾನವನೆ ಮುಂದಿಟ್ಟಿದ್ದಾನೆ‌. ಆದರೆ ಮನವೊಲಿಕೆಯ ಹೊರತಾಗಿಯೂ ಆತನ ಪ್ರೊಪೋಸಲ್ ಅನ್ನು ನಂದಿನಿ ತಿರಸ್ಕರಿಸಿದ್ದಳು. 

ಇದರಿಂದ ಅವರ ಫ್ರೆಂಡ್‌ಶಿಪ್ ಮೊದಲಿನಷ್ಟು ಉತ್ತಮವಾಗಿರಲಿಲ್ಲ. ಆದರೂ ಇಬ್ಬರೂ ಸಂಪರ್ಕದಲ್ಲಿದ್ದರು. ಚೆನ್ನೈನಲ್ಲಿ ಕೆಲಸ ಗಿಟ್ಟಿಸಿಕೊಂಡ ನಂದಿನಿ ಚಿಕ್ಕಪ್ಪನೊಂದಿಗೆ ನೆಲೆಸಿದ್ದಳು. ನಂದಿನಿಯ ಹುಟ್ಟುಹಬ್ಬದ ಹಿಂದಿನ ದಿನ ವೆಟ್ರಿಮಾರನ್ ಆಕೆಗೆ ಕರೆ ಮಾಡಿ ತನ್ನೊಂದಿಗೆ ಸ್ವಲ್ಪ ಸಮಯ ಕಳೆಯಲು ಕೇಳಿದ್ದಾನೆ. ಆಗೆ ಬಂದ ನಂದಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ‌. ಅದಕ್ಕಿಂತ ಮೊದಲು ಬೇಡ್‌ನಿಂದ ಆಕೆಯ ಕುತ್ತಿಗೆ ಮತ್ತು ಕೈಗಳನ್ನು ಸೀಳಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ನಂದಿನಿ ಮೃತಪಟ್ಟಿದ್ದಾಳೆ‌. ಇದೀಗ ವೆಟ್ರಿಮಾರನ್ ನನ್ನು ಪೊಲೀಸರು ಬಂಧಿಸಿದ್ದಾರೆ.