ಮಂಗಳೂರು: ಕುಪ್ಪೆಪದವು ನೆಲ್ಲಿಜೋರ ನಿವಾಸಿ ಲೀಲಾಕ್ಷಿ (65) ಅವರ ಮೇಲೆ ಕೋತಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ಕೈಗೆ ಗಂಭೀರ ಗಾಯ ವಾಗಿರುವ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಲೀಲಾಕ್ಷಿ ಅವರು ಸೀತಾಫಲವನ್ನು ದೋಟಿಯ ಮೂಲಕ ತೆಗೆಯುತ್ತಿದ್ದಾಗ ಜಿಗಿದು ಬಂದ ಕೋತಿಯು ಕೈಗೆ ಕಚ್ಚಿ ಪರಾರಿಯಾಗಿದೆ.
ನೆಲ್ಲಿಜೋರ ಮತ್ತು ಎಡಪದವು ಗ್ರಾಮದ ಕೊರ್ಡೇಲ್ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಈ ಕೋತಿಯ ಉಪಟಳ ಹೆಚ್ಚಾಗಿದೆ. ಒದ್ದೂರಿನಲ್ಲಿ ಮಹಿಳೆಯೋರ್ವರ ಮೇಲೂ ದಾಳಿ ನಡೆಸಿದೆ ಎನ್ನಲಾಗಿದೆ. ಕೋತಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.