-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಂತಾರ ಸಿನಿಮಾದಲ್ಲಿ ನೀವು ನಟಿಸಬಹುದು- ಹೀಗೆ ಮಾಡಿ

ಕಾಂತಾರ ಸಿನಿಮಾದಲ್ಲಿ ನೀವು ನಟಿಸಬಹುದು- ಹೀಗೆ ಮಾಡಿ




ಕಾಂತಾರ' ಕನ್ನಡ ಚಿತ್ರರಂಗದಲ್ಲಿ ಜನಮೆಚ್ಚಿದ ಸಿನಿಮಾ. ಹೊಂಬಾಳೆ ಫಿಲ್ಮ್ಸ್, ರಿಷಬ್​ ಶೆಟ್ಟಿ ಸಾರಥ್ಯದಲ್ಲಿ ಬಂದ ಈ ಚಿತ್ರ ಸೂಪರ್ ಡೂಪರ್​ ಹಿಟ್​ ಆಗಿತ್ತು.  ಈಗಲೂ ಕಾಂತಾರ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ ಆಗಿದೆ. ಕಾಂತಾರ ಪ್ರೀಕ್ವೆಲ್​​​ ಅದ್ಧೂರಿಯಾಗಿ ನಿರ್ಮಾಣಗೊಳ್ಳಲಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿದೆ. 'ಕಾಂತಾರ ಒಂದು ದಂತಕಥೆ ಅಧ್ಯಾಯ-1'ರ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವ ಚಿತ್ರತಂಡವೀಗ ಸಿನಿಪ್ರಿಯರಿಗೆ, ನಟ ನಟಿಯಾಗಬೇಕೆಂಬ ಕನಸು ಹೊತ್ತವರಿಗೆ ಶುಭಸುದ್ದಿ ಒಂದನ್ನು ಕೊಟ್ಟಿದೆ.


ಹೊಂಬಾಳೆ ಫಿಲ್ಮ್ಸ್, ರಿಷಬ್​ ಶೆಟ್ಟಿ ಪೋಸ್ಟ್:  ಬಹುನಿರೀಕ್ಷಿತ ಪ್ರಾಜೆಕ್ಟ್ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ನಟ-ನಿರ್ದೇಶಕ ರಿಷಬ್​ ಶೆಟ್ಟಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಪ್ರಕಾರ, ನೀವೂ ಕೂಡ ಕಾಂತಾರ ಪ್ರೀಕ್ವೆಲ್​ನಲ್ಲಿ ನಟಿಸಬಹುದಾಗಿದೆ. ಪೋಸ್ಟ್​ನಲ್ಲಿ, ''ಕಾಂತಾರ. ಕಲಾವಿದರು ಬೇಕಾಗಿದ್ದಾರೆ. ಪುರುಷರು: ವಯಸ್ಸು 30 ರಿಂದ 60. ಮಹಿಳೆಯರು: ವಯಸ್ಸು 18 ರಿಂದ 60. ನೋಂದಣಿಗಾಗಿ kantara.film ಅನ್ನು ಒತ್ತಿ. ಈ ಡಿಸೆಂಬರ್​​ 14ರವರೆಗೆ ಚಾಲ್ತಿಯಲ್ಲಿರುತ್ತದೆ''.




ದಯವಿಟ್ಟು ಗಮನಿಸಿ: ''ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸಲಾಗುವುದಿಲ್ಲ'' ಎಂದು ಬರೆಯಲಾಗಿದೆ. ಆನ್​ಲೈನ್​​ ಆಡಿಶನ್​ ಬಳಿಕ ವೈಯಕ್ತಿಕ ಆಡಿಷನ್‌ ನಡೆಯಲಿದೆ. ಶಾರ್ಟ್‌ಲಿಸ್ಟ್​ಗೆ ಆಯ್ಕೆ ಆದ ಪ್ರತಿಭೆಗಳನ್ನು ವೈಯಕ್ತಿಕವಾಗಿ ಆಡಿಷನ್‌ಗೆ ಕರೆಯಲಾಗುವುದು ಎಂದು ನಿರ್ದೇಶಕ ಮತ್ತು ನಿರ್ಮಾಪಕರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ