DENGUE- ಮಂಗಳೂರಿನ ಯುವಕ ಸಾವು



ಮಂಗಳೂರು: ಶಂಕಿತ ಡೆಂಗಿ ಜ್ವರಕ್ಕೆ ವಿವಾಹಿತ ಯುವಕನೊಬ್ಬ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.


ಮೂಲತ: ಹರೇಕಳ ನ್ಯೂಪಡ್ಡು ನಿವಾಸಿ, ಸದ್ಯ ನಾಟೆಕಲ್ ನಲ್ಲಿ ನೆಲೆಸಿದ್ದ ನವಾಝ್ (32) ಮೃತಪಟ್ಟವರು.


ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್ ಅವರಿಗೆ ನಿನ್ನೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ.


ವಿವಾಹಿತರಾಗಿರುವ ನವಾಝ್ ಅವರಿಗೆ ಒಂದು ವರ್ಷದ ಮಗುವಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್‌ ಜಿ ಫಿಶರೀಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.