ಶಿರಸಿಯಲ್ಲಿ ಬಸ್ - ಕಾರು ನಡುವೆ ಭೀಕರ ಅಪಘಾತ : ಕಾರಿನಲ್ಲಿದ್ದ ಮಂಗಳೂರಿನ ಐವರೂ ದಾರುಣ ಸಾವು
Saturday, December 9, 2023
ಮಂಗಳೂರು: ಸರ್ಕಾರಿ ಬಸ್ ಹಾಗೂ ಕಾರು ನಡುವೆ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ಮಂಗಳೂರು ಕಿನ್ನಿಕಂಬಳ ಮೂಲದ ಐವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದಿದೆ.
ಮಂಗಳೂರಿನ ಕಿನ್ನಿಕಂಬಳ ನಿವಾಸಿಗಳಾದ ರಾಮಕೃಷ್ಣ ರಾವ್ (71) ವಿದ್ಯಾಲಕ್ಷ್ಮೀ ರಾಮಕೃಷ್ಣ ರಾವ್ (67), ಪುಷ್ಪಾ ಮೋಹನ್ ರಾವ್ (62), ಸುಹಾಸ್ ಗಣೇಶ್ ರಾವ್ (30) ಮೃತ ರಾಮಕೃಷ್ಣ ರಾವ್ ಸಹೋದರನ ಪುತ್ರ ಅರವಿಂದ್ ಮೃತಪಟ್ಟ ದುರ್ದೈವಿಗಳು.
ಶಿರಸಿಯಲ್ಲಿ ಶುಕ್ರವಾರ ನಡೆಯಲಿದ್ದ ವಿವಾಹಕ್ಕೆಂದು ಕೈಕಂಬ ಸಮೀಪದ ಕಿನ್ನಿಕಂಬಳದಿಂದ ಶುಕ್ರವಾರ ಮುಂಜಾನೆ ಕಾರಿನಲ್ಲಿ ಹೊರಟ್ಟಿದ್ದರು. ಶಿರಸಿ ತಲುಪಲು ಇನ್ನೇನು 15 ಕಿ.ಮೀ. ಇರುವಾಗ ಹುಬಳ್ಳಿಯಿಂದ ಭಟ್ಕಳಕ್ಕೆ ಬರುತ್ತಿದ್ದ ಸರಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಐವರೂ ಮೃತ ಪಟ್ಟಿದ್ದಾರೆ.