ನಯನಾಡು: ಚಿರತೆ ದಾಳಿಗೆ ಕರು ಬಲಿ
Thursday, December 21, 2023
ಮಂಗಳೂರು: ಚಿರತೆಯೊಂದು ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ನಡೆಸಿ ಕೊಂದು ತಿಂದು ಹಾಕಿದ ಘಟನೆ ಬುಧವಾರ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡಿನಲ್ಲಿ ಸಂಭವಿಸಿದೆ.
ಇಲ್ಲಿನ ವಿಟ್ಠಲ ಶೆಟ್ಟಿ ಅವರ ಮನೆಯ ಸಮೀಪದಲ್ಲಿರುವ ಹಟ್ಟಿಯಲ್ಲಿ 6 ತಿಂಗಳ ಕರುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ವೇಳೆ ಚಿರತೆ ದಾಳಿ ಮಾಡಿ ಕರುವನ್ನು ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಎಳೆದುಕೊಂಡು ಹೋಗಿ ಕೊಂದು ಹಾಕಿದೆ. ಘಟನೆಯಿಂದ ಪರಿಸರದಲ್ಲಿ ಆತಂಕ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.