-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
B C ROAD: ಸಿಸಿ ಕೆಮರಾ ಮುಚ್ಚಿ ಹೊಟೇಲ್‌ಗೆ ನುಗ್ಗಿದ ಕಳ್ಳರು

B C ROAD: ಸಿಸಿ ಕೆಮರಾ ಮುಚ್ಚಿ ಹೊಟೇಲ್‌ಗೆ ನುಗ್ಗಿದ ಕಳ್ಳರು



ಬಂಟ್ವಾಳ : ಬಿ.ಸಿ. ರೋಡಿನಲ್ಲಿ ಸಿಸಿ ಕ್ಯಾಮರಾವನ್ನು ಮುಚ್ಚಿ ಹೊಟೇಲೊಂದಕ್ಕೆ ನುಗ್ಗಿದ್ದ ಕಳ್ಳರು ಸುಮಾರು 70 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.


ಬಿ.ಸಿ.ರೋಡಿನ  ಮುಖ್ಯರಸ್ತೆಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾರ್ಯಾಚರಿಸುತ್ತಿರುವ ಹೊಟೇಲ್‌ಗೆ ಕಳ್ಳರು ನುಗ್ಗಿದ್ದು, ಮುಸುಕುಧಾರಿ ಕಳ್ಳ ಹೋಟೇಲ್‌ನ ಬೀಗ ಮುರಿಯುವ ದೃಶ್ಯ ಕೆಮರಾದಲ್ಲಿ ಸೆರೆಯಾಗಿದೆ. 


ಆದರೆ ಆ ಬಳಿಕ ಕ್ಯಾಮರಾವನ್ನು ಅಡ್ಡಲಾಗಿ ಮುಚ್ಚಲಾಗಿದೆ. ಹೊಟೇಲ್‌ನ ಶಟರ್‌ನ ಬೀಗ ಮುರಿದು ಒಳ್ಳ ನುಗ್ಗಿ ಡ್ರಾಯರ್‌ನಲ್ಲಿದ್ದ ನಗದನ್ನು ಕಳವು ಮಾಡಲಾಗಿದೆ. ಜತೆಗೆ ಅದೇ ಕಟ್ಟಡದ ಮೆಡಿಕಲ್‌ಗೂ ನುಗ್ಗಿದ್ದಾರೆ.


ಬಿ.ಸಿ.ರೋಡಿನಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 10 ದಿನಗಳ ಹಿಂದೆ ಕೈಕಂಬದಲ್ಲಿ ಇದೇ ರೀತಿ ನಾಲೈದು ಅಂಗಡಿಗಳಿಂದ ನಗದು ಕಳವು ಮಾಡಲಾಗಿತ್ತು. ಜತೆಗೆ ಅಜ್ಜಿಬೆಟ್ಟಿನಲ್ಲಿ ಮಹಿಳೆಯ ಸರ ಎಳೆದು ಪರಾರಿಯಾಗಿದ್ದು, ಈ ಪ್ರಕರಣದ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ